ಗಿನ್ನಿಸ್ ದಾಖಲೆ ಸೃಷ್ಠಿಸಿದ ಬ್ರಿಟನ್‌ ಪ್ರಿನ್ಸ್‌ ಹ್ಯಾರಿಯ ಆತ್ಮಕಥೆ!

masthmagaa.com:

ಬಿಡುಗಡೆಗೂ ಮುಂಚೆಯೇ ಅನೇಕ ವಿವಾದಗಳಿಂದ ಫೇಮಸ್‌ ಆಗಿದ್ದ ಬ್ರಿಟನ್‌ ಪ್ರಿನ್ಸ್‌ ಹ್ಯಾರಿ ಅವ್ರ ಬಯಾಗ್ರಫಿ ʻಸ್ಪೇರ್‌ʼ ದಾಖಲೆ ಬರೆದಿದೆ. ಬಿಡುಗಡೆಯಾದ ಮೊದಲ ದಿನವೇ 14.3 ಲಕ್ಷ ಪುಸ್ತಕಗಳು ಮಾರಾಟವಾಗೋ ಮೂಲಕ ಗಿನ್ನಿಸ್‌‌ ದಾಖಲೆ ನಿರ್ಮಿಸಿದೆ. ಹ್ಯಾರಿ ಅವ್ರ ನಾನ್‌-ಫಿಕ್ಷನ್‌ ಪುಸ್ತಕ ಅತಿ ವೇಗವಾಗಿ ಮಾರಾಟವಾಗ್ತಿದೆ ಅಂತ ಗಿನ್ನಿಸ್‌ ವಿಶ್ವ ದಾಖಲೆ ಸಂಸ್ಥೆ ತಿಳಿಸಿದೆ. ಈ ಮೂಲಕ ಬಿಡುಗಡೆಯಾದ ಮೊದಲ ದಿನವೇ 8.8 ಲಕ್ಷ ಪ್ರತಿಗಳ ಮಾರಾಟವಾಗಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಅವ್ರ ʻಎ ಪ್ರಾಮಿಸ್ಡ್‌ ಲ್ಯಾಂಡ್‌ʼ ದಾಖಲೆಯನ್ನ ಹಿಂದಿಕ್ಕಿದೆ.

-masthmagaa.com

Contact Us for Advertisement

Leave a Reply