ಧ್ವಜದ ದಂಗಲ್‌ನಲ್ಲಿ ಪಾದಯಾತ್ರೆ ನಡೆಸಿದ ಕಮಲ-ದಳ ಲೀಡರ್ಸ್!

masthmagaa.com:

ಮಂಡ್ಯದ ಕೆರೆಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜ ತೆರವು ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದಿದೆ. ರಾಜ್ಯ ಸರ್ಕಾರದ ನಡೆಯನ್ನ ಖಂಡಿಸಿದ ಬಿಜೆಪಿ-ಜೆಡಿಎಸ್‌ ನಾಯಕರು ಮಂಡ್ಯ ಜಿಲ್ಲಾಡಳಿತ ಕಚೇರಿವರೆಗೆ 14 ಕಿಮೀ ಪಾದಯಾತ್ರೆ ನಡೆಸಿದ್ರು. ಹಲವು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿ ದಾರಿಯುದ್ದಕ್ಕೂ ಕಾಂಗ್ರೆಸ್‌ ವಿರುದ್ದ ಘೋಷಣೆಗಳನ್ನ ಕೂಗಿದ್ರು. ಈ ವೇಳೆ ಹಿಂದೂ ಪರ ಸಂಘಟನೆಗಳು ಕಾರ್ಯಕರ್ತರು ಫೆಬ್ರುವರಿ 9ಕ್ಕೆ ಮಂಡ್ಯ ಬಂದ್‌ಗೆ ಕರೆ ಕೊಟ್ಟಿವೆ. ಅಲ್ಲದೇ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಕೇಸರಿ ಶಾಲು ಧರಿಸಿ ಜೈ ಶ್ರೀರಾಮ್ ಅಂತ ಭಾಷಣ ಪ್ರಾರಂಭಿಸಿದ್ರು. ಈ ವೇಳೆ ನಿಮಗಿಂತ ಡಬಲ್ ರಾಷ್ಟ್ರಧ್ವಜ ಮತ್ತು ನಾಡಧ್ವಜದ ಮೇಲೆ ನಮಗೆ ಗೌರವವಿದೆ. ಹನುಮಂತನ ಕೆಣಕಿದ್ದಕ್ಕೆ ಲಂಕೆ ದಹನವಾಯ್ತು. ಅದೇ ರೀತಿ ನಿಮ್ಮ ಅವನತಿ ಆಗುತ್ತೆ. ಇಲ್ಲಿ ನಡೆದಿರುವ ಲಾಠಿ ಚಾರ್ಜ್ ಸರ್ಕಾರದ ರಾಕ್ಷಸ ಪ್ರವೃತ್ತಿ ತೋರಿಸುತ್ತದೆ ಅಂತ ಕಾಂಗ್ರೆಸ್‌ ವಿರುದ್ದ ಕಿಡಿಕಾರಿದ್ದಾರೆ. ಬಿಜೆಪಿ ನಾಯಕ ಸಿಟಿ ರವಿ “ಮಹಾಭಾರತ ಯುದ್ಧದಲ್ಲಿ ಕೃಷ್ಣಾರ್ಜುನ‌ರ ರಥದ ಮೇಲೆ ಇದ್ದಿದ್ದು ಹನುಮಂತನ ಧ್ವಜ. ಆ ಧ್ವಜ ತೆಗೆದ ನಂತರ ರಥವೇ ಭಸ್ಮವಾಯಿತು. ಅದೇ ರೀತಿ ಕಾಂಗ್ರೆಸ್ ಹನುಮ ಧ್ವಜ ತೆಗೆದಿದ್ದು, ಅದು ಕೂಡ ಭಸ್ಮವಾಗಲಿದೆ” ಅಂತ “ಕೈ” ವಿರುದ್ದ ಕಿಡಿಕಾರಿದ್ರು. ಅಚ್ಚರಿಯೆಂಬಂತೆ ಪ್ರತಿಭಟನೆಯಲ್ಲಿ ಕೇಸರಿ ಶಾಲು ಹಾಕಿ ಭಾಗಿಯಾದ ಶಾಸಕ ಜನಾರ್ದನ ರೆಡ್ಡಿ ಕಾಂಗ್ರೆಸ್‌ ಧ್ವಜ ಇಳಿಸಿ ತಪ್ಪು ಮಾಡಿದೆ ಅಂತ ಹೇಳಿದ್ದಾರೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗ್ಬೇಕು. ಈ ದೃಷ್ಠಿಯಿಂದ ನಾನು ಬಿಜೆಪಿಗೆ ಸಪೋರ್ಟ್‌ ಮಾಡ್ತೀನಿ ಅಂತ ರೆಡ್ಡಿ ಹೇಳಿದ್ದಾರೆ.

ಇನ್ನೊಂದೆಡೆ ಘಟನೆಗೆ ರಿಯಾಕ್ಟ್‌ ಮಾಡಿದ ಡಿಸಿಎಂ ಡಿಕೆಶಿ, ʻಬಿಜೆಪಿಗರು ಕಾನೂನು ಕೈಗೆತ್ತಿಕೊಳ್ಳಲು ‌ನಾವು ಅವಕಾಶ ನೀಡೋದಿಲ್ಲ. ಅವ್ರಿಗೆ ಕಾಮನ್ ಸೆನ್ಸ್ ಇಲ್ಲ. ಧರ್ಮದಲ್ಲಿ ರಾಜಕೀಯ ಮಾಡಬಾರದು. ಆದ್ರೆ ಅವ್ರು ಮಾಡ್ತಿದ್ದಾರೆ. ಇದಕ್ಕೆಲ್ಲಾ ಸರ್ಕಾರ ಅವಕಾಶ ನೀಡೋದಿಲ್ಲʼ ಅಂತ ಹೇಳಿದ್ದಾರೆ. ಇನ್ನು ಮಂಡ್ಯದ ಈ ಘಟನೆ ವಿರುದ್ದ ಇತ್ತ ಬೆಂಗಳೂರಿನಲ್ಲೂ ಬಿಜೆಪಿ ಪ್ರತಿಭಟನೆ ನಡೆಸಿದೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲೂ ಶಾಸಕ ಸಿ.ಕೆ ರಾಮ್ ಮೂರ್ತಿ, ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ರು. ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದುಕೊಂಡ್ರು.

-masthmagaa.com

Contact Us for Advertisement

Leave a Reply