ಪಂಜಾಬ್‌ನಲ್ಲಿ ಬಿಜೆಪಿ ಏಕಾಂಗಿ ಸ್ಫರ್ಧೆ, ವರುಣ್‌ ಗಾಂಧಿಗೆ ʻಕೈʼ ಆಹ್ವಾನ!

masthmagaa.com:

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಂಚ ನದಿಗಳ ನಾಡು ಪಂಜಾಬ್‌ನಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಫರ್ಧೆ ಮಾಡಲಿದೆ ಅಂತ ಪಂಜಾಬ್‌ ಬಿಜೆಪಿ ಘಟಕದ ಮುಖ್ಯಸ್ಥ ಸುನೀಲ್‌ ಜಾಖರ್ ಹೇಳಿದ್ದಾರೆ. ಈ ಮೂಲಕ ತಮ್ಮ ಹಳೇ ದೋಸ್ತ್ ಶಿರೋಮಣಿ ಅಕಾಲಿದಳದ ಜೊತೆಗೆ ಬಿಜೆಪಿ ಮೈತ್ರಿ ಮಾಡ್ಕೊಳ್ಳಲ್ಲ ಅನ್ನೋದು ಕನ್ಫರ್ಮ್‌ ಆಗಿದೆ. ಇನ್ನು ಲೋಕಸಭೆ ಚುನಾವಣೆ ಹೊತ್ತಲೆ ಪಂಜಾಬ್‌ನ ಮಾಜಿ ಸಿಎಂ ಬಿಯಾಂತ್‌ ಸಿಂಗ್‌ ಅವ್ರ ಮೊಮ್ಮಗ, ಲೂಧಿಯಾಣ ಸಂಸದ ರವನಿತ್‌ ಸಿಂಗ್‌ ಬಿಟ್ಟು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇನ್ನು ಲೋಕಸಭೆ ಚುನಾವಣೆ ಹೊತ್ತಲೆ ಪಂಜಾಬ್‌ನ ಮಾಜಿ ಸಿಎಂ ಬಿಯಾಂತ್‌ ಸಿಂಗ್‌ ಅವ್ರ ಮೊಮ್ಮಗ, ಲೂಧಿಯಾನ ಹಾಲಿ ಸಂಸದ ರವನಿತ್‌ ಸಿಂಗ್‌ ಬಿಟ್ಟು ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅಂದ್ಹಾಗೆ ಒಟ್ಟು 13 ಲೋಕಸಭಾ ಸ್ಥಾನ ಹೊಂದಿರೊ ಪಂಜಾಬ್‌ನಲ್ಲಿ ಜೂನ್ 1ಕ್ಕೆ ಅಂದ್ರೆ ಕೊನೆ ಹಂತದಲ್ಲಿ ಮತದಾನ ನಡೆಯಲಿದೆ. ಇನ್ನು ಅತ್ತ ಯುಪಿಯ ಪಿಲಿಭಿತ್ ಕ್ಷೇತ್ರದ ಬಿಜೆಪಿ ಟಿಕೆಟ್‌ನಿಂದ ವಂಚಿತವಾಗಿರೊ ಗಾಂಧಿ ಕುಟುಂಬದ ಕುಡಿ ವರುಣ್‌ ಗಾಂಧಿ ಅವ್ರಿಗೆ ತಮ್ಮ ಪಕ್ಷಕ್ಕೆ ಸೇರುವಂತೆ ಕಾಂಗ್ರೆಸ್‌ ಬಹಿರಂಗ ಆಹ್ವಾನ ನೀಡಿದೆ. ಈ ಬಗ್ಗೆ ಮಾತನಾಡಿರೋ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ʻವರುಣ್‌ ಗಾಂಧಿ ಕಾಂಗ್ರೆಸ್‌ ಪಕ್ಷಕ್ಕೆ ಸೇರೋದಾದ್ರೆ ಮೊಸ್ಟ್‌ ವೆಲಕಮ್‌ ಅಂತ ಸ್ವಾಗತಿಸಿದ್ದಾರೆ. ಅಲ್ದೇ ʻವರುಣ್‌ ಅವ್ರು ಗಾಂಧಿ ಪರಿವಾರಕ್ಕೆ ಸೇರಿರೋದ್ರಿಂದ ಬಿಜೆಪಿ ಅವ್ರಿಗೆ ಟಿಕೆಟ್‌ ನೀಡಿಲ್ಲʼ ಅಂತ ಚೌಧರಿ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply