ಭಾರತ ಹಾಗೂ ಪ್ರಧಾನಿ ಮೋದಿ ನಮ್ಮ ಅದ್ಭುತ ಸ್ನೇಹಿತ: ಪುಟಿನ್‌

masthmagaa.com:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವ್ರು ಪ್ರಧಾನಿ ನರೇಂದ್ರ ಮೋದಿಯವ್ರನ್ನ ಹಾಡಿ ಹೊಗಳಿದ್ದಾರೆ. ಭಾರತ ಹಾಗೂ ಪ್ರಧಾನಿ ಮೋದಿ ಅವ್ರು ರಷ್ಯಾದ ಅದ್ಭುತ ಸ್ನೇಹಿತ ಅಂತ ಕರೆದಿದ್ದಾರೆ. ಇದೇ ವೇಳೆ ಭಾರತದ ʻಮೇಕ್‌ ಇನ್‌ ಇಂಡಿಯಾʼ ಅಭಿಯಾನಕ್ಕೂ ಪುಟಿನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಸ್ಕೋದಲ್ಲಿ ನಡೆದ ಕಾರ್ಯಕ್ರಮವೊಂದ್ರಲ್ಲಿ ಮಾತಾಡಿರೋ ಪುಟಿನ್‌, ತಮ್ಮ ದೇಶೀಯ ಉತ್ಪನ್ನಗಳು ಮತ್ತು ಬ್ರಾಂಡ್‌ಗಳನ್ನ ಎಂಕರೇಜ್‌ ಮಾಡೋಕೆ ಭಾರತವನ್ನ ಉದಾಹರಣೆಯಾಗಿ ತಗೊಂಡು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಜೊತೆಗೆ ಭಾರತದ ಮೇಕ್‌ ಇನ್‌ ಇಂಡಿಯಾ ಯೋಜನೆಯಿಂದ ಭಾರತದ ಆರ್ಥಿಕತೆಯ ಮೇಲೆ ಪಾಸಿಟಿವ್‌ ಪರಿಣಾಮ ಬೀರಿದೆ ಅಂತ ಪುಟಿನ್‌ ಹೇಳಿದ್ದಾರೆ. ರಷ್ಯಾದ ಅದ್ಭುತ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದಲ್ಲಿರುವ ನಮ್ಮ ಸ್ನೇಹಿತರು ಕೆಲ ವರ್ಷಗಳ ಹಿಂದೆ ಮೇಕ್‌ ಇನ್‌ ಇಂಡಿಯಾ ಅನ್ನೊ ಪರಿಕಲ್ಪನೆಯನ್ನು ಜಗತ್ತಿನ ಮುಂದಿಟ್ಟರು. ಇದು ಭಾರತದ ಆರ್ಥಿಕತೆಯ ಮೇಲೆ ಬಹಳ ಸಕಾರಾತ್ಮಕ ಪರಿಣಾಮವನ್ನ ಬೀರಿದೆ ಅಂತ ಪುಟಿನ್‌ ಹೇಳಿದ್ದಾರೆ. ಇದೇ ವೇಳೆ ಮೇಕ್ ಇನ್ ಇಂಡಿಯಾದ ಉದಾಹರಣೆ ನೀಡುವ ಮೂಲಕ ಪುಟಿನ್‌, ವಿದೇಶಗಳಿಂದ ಆಮದು ಮಾಡಿಕೊಂಡ ಉತ್ಪನ್ನಗಳ ಬದಲು ತನ್ನದೇ ಆಧುನಿಕ ಸರಕುಗಳು, ಸೇವೆಗಳು ಮತ್ತು ತಂತ್ರಜ್ಞಾನವನ್ನು ಬಳಸುವಂತೆ ರಷ್ಯನ್ನರಿಗೆ ಕರೆ ನೀಡಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಮೋದಿಯವರು ಅಮೆರಿಕ ಪ್ರವಾಸ ಮುಗಿಸಿ ಬಂದ ಕೆಲವೇ ದಿನಗಳ ಬಳಿಕ ಪುಟಿನ್‌ ಈ ರೀತಿ ಮೆಚ್ಚುಗೆ ಮಾತುಗಳನ್ನಾಡಿರೋದು ಒಂದು ರೀತಿಯಲ್ಲಿ ಆಶ್ಚರ್ಯಕರವಾಗಿದೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply