ನಮ್ಮ ಬಳಿಯೂ ಕ್ಲಸ್ಟರ್‌ ಸ್ಫೋಟಕಗಳಿವೆ, ಯುಕ್ರೇನ್‌ಗೆ ಎಚ್ಚರಿಸಿದ ಪುಟಿನ್‌!

masthmagaa.com:

ಇತ್ತೀಚೆಗೆ ರಷ್ಯಾ ಮೇಲೆ ಪ್ರತಿ ದಾಳಿ ನಡೆಸಲು ಯುಕ್ರೇನ್‌ಗೆ ತನ್ನ ವಿವಾದಿತ ಕ್ಲಸ್ಟರ್ ಸ್ಪೋಟಕಗಳನ್ನು ಅಮೆರಿಕ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಷ್ಯಾ ಕೂಡ ಸಾಕಷ್ಟು ಕ್ಲಸ್ಟರ್‌ ಸ್ಪೋಟಕಗಳ ಸ್ಟಾಕ್‌ ಇಟ್ಕೊಂಡಿದೆ. ಯುಕ್ರೇನ್‌ ಏನಾದ್ರು ಈ ವಿವಾದಿತ ಶಸ್ತ್ರಾಸ್ತ್ರಗಳನ್ನ ಬಳಸಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ಕೊಡೋಕೆ ನಾವು ರೆಡಿ ಇದೀವಿ ಅಂತ ಪುಟಿನ್‌ ವಾರ್ನ್‌ ಮಾಡಿದ್ದಾರೆ. ಅಮೆರಿಕ ತನ್ನ ಕ್ಲಸ್ಟರ್‌ ಸ್ಫೊಟಕಗಳು ಯುಕ್ರೇನ್‌ಗೆ ತಲುಪಿವೆ ಅಂತ ಅನೌನ್ಸ್‌ ಮಾಡಿದ ನಂತ್ರ ರಿಯಾಕ್ಟ್‌ ಮಾಡಿರುವ ಪುಟಿನ್‌, ಇದುವರೆಗೂ ಯುಕ್ರೇನ್‌ ಯುದ್ಧದಲ್ಲಿ ಈ ಶಸ್ತ್ರಗಳನ್ನ ನಾವು ಬಳಸಿಲ್ಲ ಹಾಗೂ ಬಳಸುವ ಅಗತ್ಯ ನಮಗೆ ಬಂದಿರಲಿಲ್ಲ. ಆದ್ರೆ ಯುಕ್ರೇನ್‌ ಏನಾದ್ರು ಅವುಗಳನ್ನ ಯೂಸ್‌ ಮಾಡಿದ್ರೆ ಖಂಡಿತಾ ಬಳಸುತ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply