ರಷ್ಯಾದಲ್ಲಿ LJBTQ ಸಮುದಾಯದ ಮೇಲೆ ಮತ್ತಷ್ಟು ನಿರ್ಬಂಧ! ಹೊಸ ಕಾನೂನಿಗೆ ಪುಟಿನ್‌ ಸಹಿ!

masthmagaa.com:

ವಿಶ್ವದ ಅನೇಕ ರಾಷ್ಟ್ರಗಳು ಮುಂದುವರೆದು ಸಲಿಂಗ ಮದ್ವೆ ಹಾಗೂ LJBTQ ಸಮುದಾಯದವರ ಹಕ್ಕುಗಳನ್ನ ಲೀಗಲ್‌ ಮಾಡ್ತಾ ಇದಾವೆ. ಆದ್ರೆ ಇತ್ತ ರಷ್ಯಾ LJBTQ ಸಮುದಾಯದ ಮೇಲೆ ಹೇರಿರೊ ನಿರ್ಬಂಧಗಳನ್ನ ಇನ್ನಷ್ಟು ಹೆಚ್ಚು ಮಾಡ್ತಿದೆ. ರಷ್ಯಾದಲ್ಲಿ ಸಾರ್ವಜನಿಕವಾಗಿ LJBTQ ನಡವಳಿಕೆಗಳನ್ನ ಪ್ರದರ್ಶಿಸೋದಾಗ್ಲಿ ಅಥ್ವಾ ಆ ರೀತಿ ಜೀವನವನ್ನ ನಡೆಸೋದಾಗ್ಲಿ ಮಾಡೋದನ್ನ ನಿಷೇಧಿಸಿ ಕಾನೂನು ಒಂದಕ್ಕೆ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸಹಿ ಮಾಡಿದ್ದಾರೆ. ಈ ಕಾನೂನು ಅಡಿಯಲ್ಲಿ ಪಬ್ಲಿಕ್‌, ಆನ್‌ಲೈನ್‌, ಮೂವೀ, ಆ್ಯಡ್‌ ಅಥ್ವಾ ಬುಕ್‌ಗಳಲ್ಲಿ ಸಲಿಂಗಕಾಮವನ್ನ ಉತ್ತೇಜಿಸಿದ್ರೆ ಅಂತವರಿಗೆ ಹೆಚ್ಚಿನ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply