ಬ್ರಿಟನ್‌ ಮೇಲೆ ಮುಗಿಬೀಳುತ್ತಾ ರಷ್ಯಾ? ಪುಟಿನ್‌ ಕೊಟ್ಟ ವಾರ್ನಿಂಗ್‌ ಹೇಗಿದೆ ಗೊತ್ತಾ?

masthmagaa.com:

ಯುದ್ದಪೀಡಿತ ಯುಕ್ರೇನ್‌ಗೆ ಹೋಗಿರೋ ಜಪಾನ್‌ ಪ್ರಧಾನಿ ಫ್ಯುಮಿಯೋ ಕಿಶಿದ ಅಲ್ಲಿನ ಬುಚಾ ನಗರಕ್ಕೆ ಭೇಟಿ ಕೊಟ್ಟಿದ್ದಾರೆ. ಯುದ್ದದ ಆರಂಭದಲ್ಲಿ ಬುಚಾದಲ್ಲಿ ರಷ್ಯಾದ ಸೇನೆ ಅಲ್ಲಿನ ನಾಗರೀಕರನ್ನ ಸಾಮೂಹಿಕವಾಗಿ ಹತ್ಯೆ ಮಾಡಿತ್ತು ಅನ್ನೋ ಆರೋಪ ಕೇಳಿ ಬಂದಿತ್ತು. ಈಗ ಅದೇ ನಗರಕ್ಕೆ ಜಪಾನ್‌ ಪ್ರಧಾನಿ ವಿಸಿಟ್‌ ಮಾಡಿದ್ದಾರೆ. ಇತ್ತ ಚೀನಾ ಅಧ್ಯಕ್ಷ ಶಿ ಜಿನ್‌ ಪಿಂಗ್‌ ರಷ್ಯಾಗೆ ಭೇಟಿ ಕೊಟ್ಟಿದ್ರು. ಈ ಕುರಿತು ಮಾತನಾಡಿರೋ ರಷ್ಯಾ ಅಧ್ಯಕ್ಷ ಪುಟಿನ್‌, ಚೀನಾ ನಮ್ಮ ಜೊತೆಗೆ ಮಾತನಾಡಿದ ಉದ್ದೇಶ ಯುಕ್ರೇನ್‌ನಲ್ಲಿ ಶಾಂತಿ ನೆಲೆಸುವುದಾಗಿತ್ತು. ಆದ್ರೆ ಯುಕ್ರೇನ್‌ ಹಾಗೂ ಪಾಶ್ಚಿಮಾತ್ಯ ದೇಶಗಳೇ ಇದಕ್ಕೆ ರೆಡಿ ಇಲ್ಲ. ಯುಕ್ರೇನ್‌ನಲ್ಲಿ ಶಾಂತಿ ನೆಲೆಸೋದು ಅವರಿಗೇ ಬೇಡವಾಗಿದೆ ಅಂತ ಪುಟಿನ್‌ ಹೇಳಿದ್ದಾರೆ. ಇನ್ನು ಯುಕ್ರೇನ್‌ಗೆ ಬ್ರಿಟನ್‌ ಭಯಾನಕ ಟ್ಯಾಂಕ್‌ ಕೊಡ್ತಿದೆ ಅನ್ನೋ ಸುದ್ದಿಗೆ ಪ್ರತಿಕ್ರಿಯಿಸಿದ ಪುಟಿನ್‌, ಯುಕ್ರೇನ್‌ಗೆ ಬ್ರಿಟನ್‌ ಆ ರೀತಿ ಟ್ಯಾಂಕ್‌ ಕೊಟ್ರೆ ಅದು ರಷ್ಯಾವನ್ನ ಪ್ರತಿಕ್ರಿಯೆ ನೀಡುವಂತೆ ಒತ್ತಾಯ ಮಾಡುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply