ಪ್ರತಿ ಮನೆಗೆ 100 ಯುನಿಟ್‌ ಫ್ರೀ ಕರೆಂಟ್‌ ಘೋಷಿಸಿದ ರಾಜಸ್ಥಾನ!

masthmagaa.com:

ಕರ್ನಾಟಕದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳು ವರ್ಕ್‌ ಆದ ಬೆನ್ನಲ್ಲೇ ಅತ್ತ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರ ಕೂಡ ರಾಜ್ಯ ಹಾದಿಯನ್ನೇ ತುಳಿದಿದೆ. ಪ್ರತಿ ಮನೆಗಳಿಗೂ 100 ಯುನಿಟ್‌ ಉಚಿತ ವಿದ್ಯುತ್‌ ನೀಡೋದಾಗಿ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಅನೌನ್ಸ್‌ ಮಾಡಿದ್ದಾರೆ. ತಿಂಗಳಿಗೆ 100 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸೋರಿಗೆ ಬಿಲ್‌ ಇರೋದಿಲ್ಲ. ಅದಕ್ಕಿಂತಲೂ ಹೆಚ್ಚು ಬಳಸುವ ಕುಟುಂಬಳಿಗೆ ಮೊದಲ 100 ಯುನಿಟ್‌ ವಿದ್ಯುತ್‌ ಫ್ರೀಯಾಗಿ ನೀಡಲಾಗುವುದು. ಅಂದ್ರೆ ಎಷ್ಟೇ ಕರೆಂಟ್‌ ಬಿಲ್‌ ಬಂದ್ರು ಮೊದಲ 100 ಯುನಿಟ್‌ಗೆ ಶುಲ್ಕ ಪಾವತಿಸಬೇಕಿಲ್ಲ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply