ರಾಮಮಂದಿರ ಪೂಜೆಗಳು ಆರಂಭ: ಮಾಹಿ, ಕೊಹ್ಲಿಗೆ ಇನ್ವಿಟೇಶನ್!

masthmagaa.com:

ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ 6 ದಿನಗಳಷ್ಟೇ ಇರೋದ್ರಿಂದ ಪ್ರಾಣ ಪ್ರತಿಷ್ಠಾಪನೆ ಸಂಬಂಧಿತ ವಿಧಿ-ವಿಧಾನಗಳು ಮಂಗಳವಾರ ಶುರುವಾಗಿವೆ. ಈ ಪ್ರಯುಕ್ತ ಹಲವು ಪೂಜೆಗಳನ್ನ ನೆರವೇರಿಸಲಾಗಿದೆ. ಇನ್ನು ಬುಧವಾರ ರಾಮಲಲ್ಲಾ ವಿಗ್ರಹ ದೇವಸ್ಥಾನದ ಆವರಣಕ್ಕೆ ತಲುಪಲಿದೆ. ಇನ್ನು ರಾಮಾಯಣದಲ್ಲಿ ಜಟಾಯು ಪಕ್ಷಿಗೆ ಮೋಕ್ಷ ದೊರಕಿದ ಲೇಪಾಕ್ಷಿಗೆ ಪಿಎಂ ಮೋದಿ ಭೇಟಿ ನೀಡಿದ್ದಾರೆ. ಅಲ್ಲಿನ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಅತ್ತ ದೆಹಲಿಯ ಮುಸ್ಲಿಂ ಮಹಿಳೆಯೊಬ್ರು ಅಯೋಧ್ಯೆಯ ರಾಮಮಂದಿರಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ. ಇವ್ರ ಕನ್ಸಲ್ಲಿ ಶ್ರೀರಾಮ ಬಂದು, ರಾಮಮಂದಿರ ಹೋರಾಟದಲ್ಲಿ ನೀನು ಭಾಗಿಯಾಗಿದ್ದೆ, ಈಗ ಮಂದಿರ ನಿರ್ಮಾಣ ಆಗಿದೆ. ನೀನೇಕೆ ಬರ್ತಿಲ್ಲ? ಅಂತ ಕೇಳಿದನಂತೆ. ಇದ್ರಿಂದ ಇವ್ರು ತಮ್ಮ 700 ಕಿಲೋಮೀಟರ್‌ ಕಾಲ್ನಡಿಗೆ ಯಾತ್ರೆಯನ್ನ ಶುರು ಮಾಡಿದ್ದಾರೆ. ಅತ್ತ ಭಾರತ ನ್ಯಾಯ ಯಾತ್ರೆಯಲ್ಲಿರೋ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ರಾಮಮಂದಿರ ಕಾರ್ಯಕ್ರಮವನ್ನ ʻಮೋದಿ ಕಾ ಫಂಕ್ಷನ್‌ʼ ಅಂದಿದ್ದಾರೆ. ಅಯೋಧ್ಯೆಯಲ್ಲಿ ಆಗ್ತಿರೋದು RSS-BJP ಕಾರ್ಯಕ್ರಮ. ಅದಕ್ಕೆ ನಾವು ಹೋಗ್ತಿಲ್ಲ ಅಂದಿದ್ದಾರೆ. ಇನ್ನು ಕ್ಯಾಪ್ಟನ್‌ ಕೂಲ್‌ ಎಂಎಸ್‌ ಧೋನಿಗೆ ಶ್ರೀರಾಮಮಂದಿರ ಕಾರ್ಯಕ್ರಮದ ಆಹ್ವಾನ ನೀಡಲಾಗಿದೆ. RSS ಪ್ರಾದೇಶಿಕ ಕಾರ್ಯದರ್ಶಿ ಧನಂಜಯ್‌ ಸಿಂಗ್‌ ಮಾಹಿಗೆ ಇನ್ವಿಟೇಷನ್‌ ಕೊಟ್ಟಿದ್ದಾರೆ. ಅಲ್ಲದೆ ರನ್‌ ಮಷಿನ್‌ ವಿರಾಟ್‌ ಕೊಹ್ಲಿ ಹಾಗೂ ಅವ್ರ ಪತ್ನಿ ಅನುಷ್ಕಾ ಶರ್ಮಾ ಅವ್ರಿಗು ಆಮಂತ್ರಣ ನೀಡಲಾಗಿದೆ. ಇನ್ನು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ರಾಮಮಂದಿರ ಎಲ್ಲಾ ಹಿಂದೂಗಳಿಗೂ ಸೇರಿದ್ದು. ರಾಮನನ್ನ ನಂಬೋ ಎಲ್ಲಾ ಜನ್ರು ರಾಮಮಂದಿರಕ್ಕೆ ಭೇಟಿ ಕೊಡ್ಬೇಕು ಅಂದಿದ್ದಾರೆ. ಅಲ್ಲದೆ ರಾಮಮಂದಿರದ ಉದ್ಘಾಟನೆ ಬಿಜೆಪಿಗೆ ಅಷ್ಟೇನು ಅಡ್ವಾಂಟೇಜ್‌ ಕೊಡಲ್ಲ ಅಂದಿದ್ದಾರೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ರಾಮಮಂದಿರ ಕಾರ್ಯಕ್ರಮ ನಿಮಿತ್ತ ಅಕ್ಷತೆ ಕಾಳು ಹಂಚಿಕೆ ಮಾಡ್ತಿದ್ದ ಯುವಕನೊಬ್ಬನ ಮೇಲೆ ದಾಳಿ ನಡೆದಿದೆ. ಯುವಕರ ಗುಂಪೊಂದು ಸಂತೋಷ್‌ ಅನ್ನೋ ಹಿಂದೂ ಪರ ಕಾರ್ಯಕರ್ತನಿಗೆ ಥಳಿಸಿದೆ. ಇದನ್ನು ತಡೆಯೋಕೆ ಬಂದ ಆತನ ತಾಯಿಯ ಮೇಲೂ ಹಲ್ಲೆ ನಡೆಸಲಾಗಿದೆ.

-masthmagaa.com

 

Contact Us for Advertisement

Leave a Reply