ಹಿಂದಿ ಹೇರಿಕೆ ಬಗ್ಗೆ ರಮ್ಯಾ ಮತ್ತೊಮ್ಮೆ ವಾಗ್ದಾಳಿ

masthmagaa.com:

ಮೊನ್ನೆ ಅಷ್ಟೆ ಬೆಂಗಳೂರಿನಲ್ಲಿ ನಡೆದಂತ ಒಂದು ದೃಶ್ಯ ಸೋಷಿಯಲ್‌ ಮೀಡಿಯಾಗಳಲ್ಲಿ ಸಖತ್‌ ವೈರಲ್‌ ಆಗಿತ್ತು. ಆಟೋ ಡ್ರೈವರ್‌ ಹತ್ರ ಪ್ಯಾಸೆಂಜರ್‌ ಲೇಡಿ ಒಬ್ಬಳು ಹಿಂದಿಯಲ್ಲಿ ಮಾತಾಡಿ ಅಂತ ಹೇಳಿದ್ಲು. ಅದಕ್ಕೆ ಆಟೋ ಡ್ರೈವರ್‌ “ನಾನ್‌ ಯಾಕೆ ಮಾತಾಡ್ಬೇಕು, ಇದು ಕರ್ನಾಟಕ, ನೀವು ಕರ್ನಾಟಕಕ್ಕೆ ಬಂದಿದ್ರಿ ನೀವು ಕನ್ನಡ ಮಾತಾಡಿ, ನಾನು ನನ್ನ ಭಾಷೆಯಲ್ಲೇ ಮಾತಾಡ್ತೀನಿ ಅಂತ ಅವಾಜ್‌ ಹಾಕಿದ ವಿಡಿಯೋ ಇದಾಗಿತ್ತು. ಸದ್ಯ ನಟಿ ರಮ್ಯ ಈ ವಿಷಯದ ಬಗ್ಗೆ ಟ್ಟೀಟ್‌ ಮಾಡಿದ್ದಾರೆ. “ನಾಟು ನಾಟು ಹಾಡು ತೆಲುಗಿನಲ್ಲಿ ಪ್ರದರ್ಶಿಸಿದ್ದಕ್ಕೆ ನನಗೆ ಖುಷಿ ಇದೆ. ಆದರೆ ಭಾರತ ವಿಭಿನ್ನ ಸಂಸ್ಕ್ರತಿ ಮತ್ತು ಭಾಷೆಗಳ ವೈವಿಧ್ಯಮಯ ದೇಶ ಎಂದು ಇಡೀ ಜಗತ್ತಿಗೂ ತಿಳಿದಿದೆ, ಭಾರತ ಅಂದ್ರೆ ಕೇವಲ ಹಿಂದಿಯಲ್ಲ ಅಥ್ವಾ ಬಾಲಿವುಡ್‌ ಅಲ್ಲ. ಆ ರೀತಿ ಅಂದ್ಕೊಂಡ್ರೆ ಅದು ಮೂರ್ಖತನ” ಅಂತ ಬರೆದುಕೊಂಡಿದ್ದಾರೆ. ಹಲವು ಬಾರಿ ನಟಿ ರಮ್ಯಾ ಅವರು ಹಿಂದಿ ಹೇರಿಕೆಯ ಬಗ್ಗೆ ವಾಗ್ದಾಳಿ ನಡೆಸಿದ್ರು, ಈ ಸಲವೂ ಕೂಡ ಆಟೋ ಡ್ರೈವರ್‌ ಪರ ಮಾತಾಡಿ ಹಿಂದಿ ಹೇರಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕೆಲವರು ಸರಿ ಇದೆ ಅಂದ್ರೆ ಇನ್ನೂ ಕೆಲವರು ನೆಗೆಟೀವ್‌ ಕಾಮೆಂಟ್‌ ಮಾಡಿದ್ದಾರೆ. ಹಿಂದಿ ಹೇರಿಕೆ ಬಗ್ಗೆ ಸದ್ಯ ಪ್ರಕಾಶ್‌ ರೈ ಕೂಡ ಅಸಮಾಧಾನ ವ್ಯಕ್ತ ಮಾಡಿದ್ರು. “ನನಗೆ ಹಿಂದಿ ಬರಲ್ಲ ಹೋಗ್ರಪ್ಪ” ಎನ್ನುವ ಟೆಕ್ಸ್ಟ್‌ ಇರುವ ಟೀ ಶರ್ಟ್‌ ಹಾಕೊಂಡಿರುವ ಫೊಟೊವನ್ನ ತಮ್ಮ ಶೇರ್‌ ಮಾಡ್ಕೊಂಡಿದ್ರು.

-masthmagaa.com

Contact Us for Advertisement

Leave a Reply