ಜಿಯೋದಿಂದ ಇನ್ಮುಂದೆ ಫ್ರೀ ಕಾಲ್ ಇಲ್ಲ..!

ಇಷ್ಟು ದಿನ ಜಿಯೋ ನಂಬರ್‍ನಿಂದ ಸಿಕ್ಕ ಸಿಕ್ಕ ನಂಬರ್ ಕಾಲ್ ಮಾಡಿ ಮಾತನಾಡಿದ್ದೇ ಮಾತನಾಡಿದ್ದು. ಆದ್ರೆ ಆದ್ರೆ ಇನ್ಮುಂದೆ ನೀವು ಜಿಯೋ ನಂಬರ್‍ನಿಂದ ಕಂಪನಿಯ ನಂಬರ್‍ಗೆ ಕರೆ ಮಾಡಬೇಕಾದ್ರೆ 6 ಪೈಸೆ ನೀಡಬೇಕಾಗುತ್ತೆ.

ಜಿಯೋದಿಂದ ಜಿಯೋ ಮತ್ತು ಲ್ಯಾಂಡ್ ಲೈನ್‍ಗೆ ಕರೆ ಮಾಡಿದ್ರೆ ಯಾವುದೇ ವೆಚ್ಚ ತಗುಲುವುದಿಲ್ಲ. ಹೀಗಾಗಿ ನೀವು ಜಿಯೋದಿಂದ ಬೇರೆ ಕಂಪನಿಯ ನಂಬರ್‍ಗೆ ಕರೆ ಮಾಡೋದಾದ್ರೆ, ಹೆಚ್ಚುವರಿಯಾಗಿ ರೀಚಾರ್ಜ್ ಮಾಡಿಕೊಳ್ಳಬೇಕು. ಅಕ್ಟೋಬರ್ 10ರಿಂದಲೇ ಇದು ಅನ್ವಯವಾಗಲಿದೆ.

ಟ್ರಾಯ್ ಟರ್ಮಿನೇಷನ್ ಚಾರ್ಜ್ ಜೀರೋ ಮಾಡೋವರೆಗೆ ಬಳಕೆದಾರರು ದುಡ್ಡು ನೀಡಬೇಕು. ಜನವರಿ 1, 2020ಕ್ಕೆ ಟ್ರಾಯ್ ನಿಂದ ಟರ್ಮಿನೇಷನ್ ಚಾರ್ಜ್ ಜೀರೋ ಮಾಡೋ ಸಾಧ್ಯತೆ ಇದೆ. ಇದ್ರ ನಂತರ ಜಿಯೋ ಈ ಕಡಿತವನ್ನು ನಿಲ್ಲಿಸಲಿದೆ.

10 ರೂಪಾಯಿಯ ಟಾಪ್ ಅಪ್ ಹಾಕಿಕೊಂಡರೆ 1 ಜಿಬಿ ಇಂಟರ್ನೆಟ್ ಫ್ರೀ ಸಿಗಲಿದೆ. ಅಲ್ಲದೆ 10 ರೂಪಾಯಿ ರೀಚಾರ್ಜ್ ಮಾಡಿದ್ರೆ 124 ನಿಮಿಷಗಳ ಕಾಲ ಬೇರೆ ಕಂಪನಿಯ ನಂಬರ್ ಜೊತೆ ಮಾತನಾಡಬಹುದು.

Contact Us for Advertisement

Leave a Reply