ದಿನಕ್ಕೆ 50 ಸಾವಿರ ಕೇಸ್‌.. ಆದ್ರೂ ಯಾವುದೇ ಕೊರೋನಾ ರೂಲ್ಸ್‌ ಇಲ್ಲಾ

masthmagaa.com:

ಕೊರೋನಾ ಹಿನ್ನೆಲೆ ಇಂಗ್ಲೆಂಡ್​​ನಲ್ಲಿ ಕಳೆದೊಂದು ವರ್ಷದಿಂದ ಹೇರಿದ್ದ ಎಲ್ಲಾ ನಿರ್ಬಂಧಗಳನ್ನ ಇವತ್ತಿನಿಂದ ಬಹುತೇಕ ತೆಗೆದುಹಾಕಲಾಗಿದೆ. ಹೀಗಾಗಿ ಇವತ್ತಿನ ದಿನವನ್ನ ಫ್ರೀಡಂ ಡೇ ಅಂತಾನೇ ಬಣ್ಣಿಸಲಾಗ್ತಿದೆ. ಭಾನುವಾರ ಮಧ್ಯರಾತ್ರಿಯಿಂದಲೇ ನೈಟ್​ ಕ್ಲಬ್​ಗಳು ಓಪನ್ ಆಗಿದ್ರಿಂದ ಕ್ಲಬ್​ಗಳಿಗೆ ಗುಂಪು ಗುಂಪಾಗಿ ಬರ್ತಿರೋ ಜನ ಮೋಜು ಮಸ್ತಿ ಮಾಡ್ತಿದ್ದಾರೆ. ಹಾಗಂತ ಅಲ್ಲಿ ಕೊರೋನಾ ಕೇಸಸ್​ ಕಮ್ಮಿಯಾಗಿದೆ ಅಂತಲ್ಲ. ಯುಕೆನಲ್ಲಿ ಡೈಲಿ ಕೇಸಸ್​ 50 ಸಾವಿರ ಸಮೀಪಿಸಸ್ತಿದೆ. ಇದರ ನಡುವೆನೇ ನಿರ್ಬಂಧಗಳನ್ನ ಸಂಪೂರ್ಣವಾಗಿ ತೆಗೆದುಹಾಕಿದ್ದು ಸರಿಯಲ್ಲ ಅಂತ ತಜ್ಞರು ಎಚ್ಚರಿಸಿದ್ದಾರೆ. ಮತ್ತೊಂದುಕಡೆ ಯುಕೆ ಪ್ರಧಾನಿ ಬೋರಿಸ್​ ಜಾನ್ಸನ್​ ಇವತ್ತು ಭಾಷಣ ಮಾಡಬೇಕಿತ್ತು. ಆದ್ರೆ ಅಲ್ಲಿನ ಆರೋಗ್ಯ ಸಚಿವರಿಗೆ ಕೊರೋನಾ ಬಂದಿರೋದ್ರಿಂದ ಅವರು​ ಐಸೋಲೇಷನ್​ಗೆ ಒಳಪಟ್ಟಿದ್ದಾರೆ. ಈ ಹಿನ್ನೆಲೆ ನಿನ್ನೆ ವಿಡಿಯೋ ಸಂದೇಶ ಕಳಿಸಿರೋ ಅವರು, ಎಲ್ಲರೂ ಎಚ್ಚರದಿಂದಿರಿ ಅಂತ ಆಗ್ರಹಿಸಿದ್ದಾರೆ.

-masthmagaa.com

Contact Us for Advertisement

Leave a Reply