ಕೋವಿಡ್‌ನಿಂದ ʻಜನ ಸತ್ರೆ ಸಾಯ್ಲಿ ಬಿಡಿʼ ಅಂದಿದ್ರಾ ಸುನಾಕ್‌?

masthmagaa.com:

ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ 2020ರ ಕೋವಿಡ್‌ ಸಮಯದಲ್ಲಿ ʻಜನ ಸತ್ರೆ ಸಾಯ್ಲಿ ಬಿಡಿʼ ಅಂದಿದ್ರು ಅಂತ ಬ್ರಿಟನ್‌ ಆರೋಗ್ಯ ಅಧಿಕಾರಿಯೊಬ್ರು ಆರೋಪಿಸಿದ್ದಾರೆ. ಬ್ರಿಟನ್‌ನಲ್ಲಿ ಎರಡನೇ ಲಾಕ್‌ಡೌನ್‌ ಹೇರೋ ಬಗ್ಗೆ, ಆಗ ಹಣಕಾಸು ಸಚಿವರಾಗಿದ್ದ ಸುನಾಕ್‌ ಇಂತಹ ಸ್ಟೇಟ್‌ಮೆಂಟ್‌ ನೀಡಿದ್ರು ಅಂತ ಮಾಜಿ ಪ್ರಧಾನಿ ಬೊರಿಸ್‌ ಜಾನ್ಸ್‌ನ್‌ಗೆ ಸೈಂಟಿಫಿಕ್‌ ಅಡ್ವೈಸರ್‌ ಆಗಿದ್ದ ಪ್ಯಾಟ್ರಿಕ್‌ ವಲಾನ್ಸ್‌ ಹೇಳಿದ್ದಾರೆ. ಈ ವಿಚಾರವನ್ನ ಅವರ ಮೇಲಧಿಕಾರಿ ಡೊಮಿನಿಕ್ ಕಮ್ಮಿನ್ಸ್‌ ತಮಗೆ ತಿಳಿಸಿದ್ರು ಅಂತ ವಲಾನ್ಸ್‌ ಹೇಳಿದ್ದಾರೆ. ಈ ಬಗ್ಗೆ ರಿಪ್ಲೈ ನೀಡಿರೋ ಸುನಾಕ್‌ ಕಚೇರಿ ವಕ್ತಾರ ʻಪ್ರತಿ ಮಾತಿಗೂ ಪ್ರಧಾನ ಮಂತ್ರಿ ಆಗಿರೋರು ಪ್ರತಿಕ್ರಿಯೆ ಕೊಡೋಕಾಗಲ್ಲ. ಅಂತಹ ಹೇಳಿಕೆ ನೀಡಿರೋ ಸಾಕ್ಷಿ ಇದ್ರೆ ದಯವಿಟ್ಟು ತಗೊಂಡ್‌ ಬನ್ನಿʼ ಅಂದಿದ್ದಾರೆ. ಅಂದ್ಹಾಗೆ ಬ್ರಿಟನ್‌ನಲ್ಲಿ ಕೋವಿಡ್‌ಗೆ 2.2 ಲಕ್ಷ ಜನರು ಬಲಿಯಾಗಿದ್ರು. ಬೊರಿಸ್‌ ಜಾನ್ಸನ್ ಸರ್ಕಾರ ಪ್ಯಾಂಡಮಿಕ್‌ಗೆ ಮುಂಜಾಗೃತೆ ತಗೊಳ್ಳಿಲ್ಲ ಅಂತ ಟೀಕೆ ವ್ಯಕ್ತವಾಗಿತ್ತು.‌ ಇದೇ ಕಾರಣಕ್ಕೆ ಸುನಾಕ್‌ ತಾವೊಬ್ಬ ಸೀನಿಯರ್‌ ಮಂತ್ರಿ ಆಗಿದ್ದುಕೊಂಡೇ ತಮ್ಮನ್ನ ತಾವು ಬದಲಾವಣೆ ತರೋ ನಾಯಕ ಅಂತ ಬಿಂಬಿಸಿಕೊಂಡಿದ್ರು. ಅಲ್ಲದೆ ಕೋವಿಡ್‌ ಸಮಯದಲ್ಲಿ ಸಾಮಾಜಿಕ ಅಂತರವಿಲ್ಲದ “Eat Out to Help out” ಪಾಲಿಸಿಯಿಂದಾಗಿ “Dr. Death” ಅಂತ ಕರೆಸಿಕೊಂಡಿದ್ರು.

-masthmagaa.com

Contact Us for Advertisement

Leave a Reply