ಲಂಡನ್‌ನಲ್ಲಿ ದೀಪಾವಳಿ ಹಬ್ಬ ಆಚರಿಸಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌!

masthmagaa.com:

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವ್ರು ಲಂಡನ್‌ನಲ್ಲಿ ದೀಪಾವಳಿ ಹಬ್ಬವನ್ನ ದೀಪ ಬೆಳಗಿಸಿ ಆಚರಿಸಿದ್ದಾರೆ. ಈ ಆಚರಣೆಯಲ್ಲಿ ಭಾಗಿಯಾಗೋಕೆ ರಿಷಿ ಸುನಕ್‌ ಅವ್ರು ಬ್ರಿಟನ್‌ನಲ್ಲಿ ವಾಸಿಸೋ ಹಿಂದುಗಳನ್ನ ಆಹ್ವಾನ ಮಾಡಿದ್ದಾರೆ. ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವ್ರ ಜೊತೆಗೂಡಿ ರಿಷಿ ಸುನಕ್‌ ಬೆಳಕಿನ ಹಬ್ಬವನ್ನ ಲಂಡನ್‌ನ ಡೌನಿಂಗ್‌ ಸ್ಟ್ರೀಟ್‌ನಲ್ಲಿ ಅಚರಿಸಿದ್ದಾರೆ ಅಂತ ಬ್ರಿಟನ್‌ ಪ್ರಧಾನಿ ಕಛೇರಿಯ ಅಫಿಶಿಯಲ್‌ `X’ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ. ನೆನ್ನೆ ನಡೆದ ಈ ಆಚರಣೆಯ ಪೋಟೋಗಳನ್ನ ಕೂಡ `X’ನಲ್ಲಿ ಶೇರ್‌ ಮಾಡಿ, ʻಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳುʼ ಅಂತ ವಿಶ್‌ ಮಾಡಿದ್ದಾರೆ. ಅಂದ್ಹಾಗೆ ಈ ಅಚರಣೆಯಲ್ಲಿ ಭಾಗಿಯಾಗೋಕೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಸೇರಿದ್ರು.

-masthmagaa.com

Contact Us for Advertisement

Leave a Reply