ಅಕ್ಷರ ಧಾಮಕ್ಕೆ ಭೇಟಿ ನೀಡ ಪೂಜೆ ಸಲ್ಲಿಸಿದ ಬ್ರಿಟನ್‌ PM ಸುನಾಕ್‌ ದಂಪತಿ!

masthmagaa.com:

ಜಿ20 ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಹಾಗೂ ಅವ್ರ ಪತ್ನಿ ಅಕ್ಷತಾ ಮೂರ್ತಿ ಅವ್ರು ಇಂದು ದೆಹಲಿಯಲ್ಲಿರುವ ಅಕ್ಷರಧಾಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಈ ಕುರಿತು ಅಕ್ಷರಧಾಮ ದೇವಾಲಯದ ನಿರ್ದೇಶಕ ಜ್ಯೋತಿಂದ್ರ ದವೆ ಮಾತನಾಡಿ, ಸುನಾಕ್‌ ಬಂದ ಅನುಭವ ಅಸಾಧಾರಣವಾಗಿತ್ತು. ಅವರು ಬಹಳ ನಂಬಿಕೆಯಿಂದ ಪೂಜೆ ಮತ್ತು ಆರತಿಯನ್ನು ಮಾಡಿದರು. ನಾವು ಅವರಿಗೆ ದೇವಾಲಯವನ್ನು ತೋರಿಸಿದ್ದೇವೆ. ನಂತರ ದೇವಸ್ಥಾನದ ಮಾದರಿಯನ್ನು ಉಡುಗೊರೆಯಾಗಿ ನೀಡಿದ್ದು, ಸುನಾಕ್‌ ದಂಪತಿ ಇಲ್ಲಿ ಪ್ರತಿ ನಿಮಿಷವನ್ನು ಆನಂದಿಸಿದರು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply