ಯುಕ್ರೇನ್‌ ವಿರುದ್ದ ಪುಟಿನ್‌ ಹೊಸ ಶಪಥ! ಇದನ್ನೇ ಮಾಡೇ ಮಾಡ್ತೀವಿ ಅಂತ ಹೇಳಿದ್ದೇನು?

masthmagaa.com:

ಯುಕ್ರೇನ್‌ ಮೇಲಿನ ದಾಳಿಯಲ್ಲಿ ಯುಕ್ರೇನ್‌ಗೆ ಸೇರಿದ ಇಂಧನ ಮೂಲಸೌಕರ್ಯಗಳ ಮೇಲೆ ಅಂದ್ರೆ ಎನರ್ಜಿ ಇನ್ಪ್ರಾಂಸ್ಟ್ರಕ್ಚರ್‌ ಮೇಲೆ ರಷ್ಯಾ ಪಡೆಗಳು ದಾಳಿ ಮಾಡ್ತಿವೆ. ಇದೀಗ ಈ ರೀತಿಯ ದಾಳಿ ಮಾಡೋದನ್ನ ನಮ್ಮ ಪಡೆಗಳು ಮುಂದುವರೆಸುತ್ತವೆ ಅಂತ ಪುಟಿನ್‌ ಹೇಳಿದ್ದಾರೆ. ಪಕ್ಕದ ಯುಕ್ರೇನ್‌ ಮೇಲಿನ ಇಂಧನ ಮೂಲಸೌಕರ್ಯದ ಮೇಲೆ ನಮ್ಮ ದಾಳಿಯ ಬಗ್ಗೆ ಬೇಕಾದಷ್ಟು ಮಾತುಗಳು ಕೇಳಿ ಬರ್ತಿವೆ. ಹೌದು, ನಾವು ಅದನ್ನು ಮಾಡುತ್ತೇವೆ. ಆದರೆ ಅದನ್ನು ಯಾರು ಪ್ರಾರಂಭಿಸಿದರು ಅಂತ ಯುಕ್ರೇನ್‌ ವಿರುದ್ದ ಹರಿಹಾಯ್ದಿದ್ದಾರೆ. ಜೊತೆಗೆ ಈ ರೀತಿಯ ಟೀಕೆಗಳು ನಮ್ಮ ಕಾರ್ಯಾಚರಣೆಗಳಿಗೆ ಅಡ್ಡಿಯಾಗುವುದಿಲ್ಲ ಅಂತ ಹೇಳಿದ್ದಾರೆ. ಅಂದಹಾಗೆ ಅಮೆರಿಕ ಸೇರಿದಂತೆ ಹಲವಾರು ಪಾಶ್ಚೀಮಾತ್ಯ ದೇಶಗಳು ರಷ್ಯಾ, ಯುಕ್ರೇನ್‌ಗೆ ಸೇರಿದ ವಿದ್ಯುತ್‌ ಸ್ಥಾವರಗಳ ಮೇಲೆ ದಾಳಿ ಮಾಡಿ ಜನರನ್ನ ಕತ್ತಲೆಗೆ ತಳ್ತಾಯಿದೆ ಅಂತ ಕಿಡಿಕಾರಿದ್ವು. ಈಗ ನೋಡಿದ್ರೆ ಪುಟಿನ್‌ ಇದಕ್ಕೆಲ್ಲಾ ಕ್ಯಾರೇ ಅಂತ ಅಂದಿಲ್ಲ. ಬದಲಾಗಿ ಇದು ಹೀಗೆ ಮುಂದುವರೆಯುತ್ತೆ ಅಂತ ಹೊಸದಾಗಿ ಶಪಥ ಮಾಡಿದಾರೆ.

-masthmagaa.com

Contact Us for Advertisement

Leave a Reply