ಪ್ರೈಸ್‌ ಕ್ಯಾಪ್‌ ಬೆಂಬಲಿಸಿದ ದೇಶಗಳಿಗೆ ರಷ್ಯಾ ತೈಲ ರಫ್ತು ಬಂದ್!

masthmagaa.com:

ಯುಕ್ರೇನ್‌ ಯುದ್ದದ ಕಾರಣದಿಂದ ರಷ್ಯಾದ ತೈಲ ಬ್ಯಾರೆಲ್‌ ಮೇಲೆ ಪಾಶ್ಚಿಮಾತ್ಯ ದೇಶಗಳು ದರ ಮಿತಿಯನ್ನ ಹೇರಿದ್ವು. ಇದಕ್ಕೆ ಪ್ರತಿಯಾಗಿ ತನ್ನ ಮೇಲೆ ಪ್ರೈಸ್‌ ಕ್ಯಾಪ್ ಹೇರಿರೊ ದೇಶಗಳಿಗೆ ತೈಲ ರಫ್ತನ್ನ ಬ್ಯಾನ್‌ ಮಾಡೋದಾಗಿ‌ ರಷ್ಯಾ ಹೇಳಿದೆ. ಈ ಬಗ್ಗೆ ರಷ್ಯಾ ಅಧಿಕೃತ ಕಾನೂನನ್ನ ಜಾರಿ ಮಾಡಿದೆ. ಪ್ರೈಸ್‌ ಕ್ಯಾಪ್‌ಗೆ ಬೆಂಬಲ ನೀಡಿರೊ ದೇಶಗಳು ಹಾಗೂ ಕಂಪನಿಗಳಿಗೆ ತೈಲ ಹಾಗೂ ತೈಲ ಉತ್ಪನ್ನಗಳನ್ನ ರಫ್ತು ಮಾಡೋದನ್ನ ನಿಷೇಧಿಸಲಾಗಿದೆ. ಈ ಕಾನೂನು 2023ರ ಫೆಬ್ರವರಿ 1ರಿಂದ ಜಾರಿಯಾಗಿ, ಜುಲೈ 1ರವರೆಗೆ ಇರುತ್ತೆ ಅಂತ ಹೇಳಲಾಗಿದೆ. ಜೊತೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರ ವಿಶೇಷ ನಿರ್ಧಾರದ ಆಧಾರದ ಮೇಲೆ ಈ ನಿಷೇಧವನ್ನ ತೆಗೆದು ಹಾಕಬಹುದು ಅಂತಾನೂ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply