ಅಕ್ಕಿ ಆಮದು ವಿಚಾರ: ಪಾಕ್‌ಗೆ ಖಡಕ್‌ ವಾರ್ನ್‌ ಮಾಡಿದ ರಷ್ಯಾ!

masthmagaa.com:

ಅಕ್ಕಿ ಆಮದು ಮಾಡಿಕೊಳ್ಳೊ ವಿಚಾರವಾಗಿ ರಷ್ಯಾ ಪಾಕಿಸ್ತಾನಕ್ಕೆ ಖಡಕ್‌ ವಾರ್ನ್‌ವೊಂದನ್ನ ಮಾಡಿದೆ. ಇನ್ಮುಂದೆ ನಿಮ್ಮ ಅಕ್ಕಿ ಸ್ವಚ್ಛವಾಗಿ ಇಲ್ದೇ ಹೋದ್ರೆ ನಿಮ್ಮಿಂದ ಅಕ್ಕಿಯನ್ನ ಆಮದು ಮಾಡ್ಕೊಳದನ್ನೆ ನಿಲ್ಲಿಸ್ತೇವೆ ಅಂತ ರಷ್ಯಾ ಹೇಳಿದೆ. ಪಾಕಿಸ್ತಾನದಿಂದ ರಷ್ಯಾಗೆ ರಫ್ತಾಗೊ ಅಕ್ಕಿಯಲ್ಲಿ ಫೈಟೊಸ್ಯಾನಿಟರಿ ಅಂದ್ರೆ ಆಹಾರದಲ್ಲಿ ಸುರಕ್ಷತಾ ಕ್ರಮಗಳ ಉಲ್ಲಂಘನೆಯಾಗಿದೆ. ಹೀಗಾಗಿ ಇನ್ಮುಂದೆ ಸರಿಯಾದ ಆಹಾರ ಕ್ರಮಗಳನ್ನ ಅನುಸರಿಸಿ ಅಕ್ಕಿಯನ್ನ ಆಮದು ಮಾಡಿ, ಇಲ್ದಿದ್ರೆ ನಿಮ್ಮ ಅಕ್ಕಿನೇ ಬೇಡ ಅಂತೇಳಿದೆ. ಅಂದ್ಹಾಗೆ 2019ರಲ್ಲೂ ರಷ್ಯಾಗೆ ಪಾಕ್‌ ಅಕ್ಕಿ ರಫ್ತು ಮಾಡೊ ವಿಚಾರವಾಗಿ ಇದೇ ರೀತಿಯಾಗಿತ್ತು. ಆಗ ರಷ್ಯಾ, ಪಾಕ್‌ ಅಕ್ಕಿ ಮೇಲೆ 2 ವರ್ಷ ನಿಷೇಧ ಹೇರಿತ್ತು. ಅಲ್ದೇ 2006ರಲ್ಲಿ ಅಕ್ಕಿ ರಫ್ತು ವಿಚಾರವಾಗಿ ಪಾಕ್‌ ಸರಿಯಾದ ಆಹಾರ ಸುರಕ್ಷತೆ ಕ್ರಮಗಳನ್ನ ಅನುಸರಿಸ್ತಿಲ್ಲ ಅಂತ ಆಗ್ಲೂ ರಷ್ಯಾ ಪಾಕ್‌ ಅಕ್ಕಿಗೆ ಬ್ಯಾನ್‌ ಹೇರಿತ್ತು. ಈಗ ಮತ್ತೆ ಪಾಕ್‌ಗೆ ವಾರ್ನ್ ನೀಡಿದೆ.

-masthmagaa.com

Contact Us for Advertisement

Leave a Reply