ರಷ್ಯಾ ದಾಳಿಗೆ ಯುಕ್ರೇನ್‌ನಲ್ಲಿ 30 ಬಲಿ, 160 ಜನರಿಗೆ ಗಾಯ!

masthmagaa.com:

ರಷ್ಯಾ ಯುಕ್ರೇನ್‌ ಮೇಲೆ 158 ಮಿಸೈಲ್‌ ಮತ್ತು ಡ್ರೋನ್‌ಗಳನ್ನ ಹಾರಿಸಿದ್ದು ಅದ್ರಲ್ಲಿ 114ನ್ನ ನಾಶಮಾಡಲಾಗಿದೆ ಅಂತ ಯುಕ್ರೇನ್‌ ಹೇಳಿದೆ. ಈ ದಾಳಿಯಲ್ಲಿ 30 ಜನ ಮೃತ ಪಟ್ಟು 160 ಜನ ಗಾಯಗೊಂಡಿದ್ದಾರೆ ಅಂತ ತಿಳಿದು ಬಂದಿದೆ. ಇನ್ನು ರಷ್ಯಾ ಮಿಸೈಲ್‌ಗಳು ಈಗ ಪೋಲೆಂಡ್ ಏರ್‌ಸ್ಪೇಸ್‌ ಪ್ರವೇಶಿಸಿವೆ ಅಂತ ಪೋಲಿಷ್‌ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತ ಯುಕ್ರೇನ್‌ಗೆ ನೆರವು ನೀಡಲು ಅಮೆರಿಕನ್‌ ಕಾಂಗ್ರೆಸ್‌ನ ಅನುಮತಿಯನ್ನ ಪ್ರೆಸಿಡೆಂಟ್‌ ಜೊ ಬೈಡೆನ್‌ ಕೋರಿದ್ದಾರೆ. ಸಧ್ಯಕ್ಕೆ ಅಮೆರಿಕನ್ ಕಾಂಗ್ರೆಸ್‌ ಶಸ್ತ್ರಾಸ್ತ್ರಗಳ ಒಪ್ಪಂದವನ್ನ ನವೀಕರಿಸೋವರೆಗೂ ನಾವ್‌ ಯುಕ್ರೇನ್‌ಗೆ ನೆರವು ನೀಡೊದನ್ನ ಮುಂದುವರೆಸೋಕ್ಕಾಗಲ್ಲ ಅಂತ ಬೈಡೆನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply