ರಷ್ಯಾ ಸೇನೆಗೆ S-500 ಏರ್‌ ಡಿಫೆನ್ಸ್‌ ಸಿಸ್ಟಮ್‌ ನಿಯೋಜನೆಗೆ ಸಿದ್ದತೆ

masthmagaa.com:

ಜಾಗತಿಕ ರಕ್ಷಣಾ ಲೋಕ ಬೆಚ್ಚಿಬೀಳೋ ಥರ ರಷ್ಯಾ ಮತ್ತೊಂದು ಭಯಾನಕ ಆಯುಧವನ್ನ ರಿವೀಲ್‌ ಮಾಡಿದೆ. ಎರಡು ವರ್ಷದ ಹಿಂದೆ ಸರ್ಮತ್‌ ಅನ್ನೋ ಮಿಸೈಲ್‌ ಒಂದನ್ನ ತೋರಿಸಿ ಅಮೆರಿಕ ಮತ್ತು ಮಿತ್ರರಿಗೆ ಭಯ ಹುಟ್ಟಿಸಿತ್ತು. ಈಗ ತನ್ನ ಬಹು ನಿರೀಕ್ಷಿತ ನೆಕ್ಸ್ಟ್‌ ಜನರೇಷನ್‌ S-500 ಏರ್‌ ಡಿಫೆನ್ಸ್‌ ಸಿಸ್ಟಮ್‌ನ್ನ ಸೇನೆಗೆ ನಿಯೋಜಿಸೋಕೆ ರೆಡಿಯಾಗಿದೆ. ಇದು ರಷ್ಯಾ ಸೇನೆಗೆ ದೊಡ್ಡ ಮಟ್ಟದ ಶಕ್ತಿ ತುಂಬಲಿದೆ ಅಂತ ರಷ್ಯಾದ ರಕ್ಷಣಾ ಸಚಿವರಾದ ಸೆರ್ಗೆಯ್‌ ಶೋಯಿಗು ಮಾಹಿತಿ ನೀಡಿದ್ದಾರೆ. ಇನ್ನು ಈ S-500 ಮಿಸೈಲ್‌ ಸಿಸ್ಟಮ್‌ನಲ್ಲಿ ಎರಡು ವಿಧ ಇದೆ. ಒಂದು ಲಾಂಗ್‌-ರೇಂಜ್‌ ಡಿಫೆನ್ಸ್‌ ಮಿಸೈಲ್‌ ಸಿಸ್ಟಮ್‌ ಮತ್ತು ಆಂಟಿ ಮಿಸೈಲ್‌ ಡಿಫೆನ್ಸ್‌ ಸಿಸ್ಟಂ ಅಂತ. ಇದನ್ನ Almaz-Antey Air & Space Defense Corporation ಅಭಿವೃದ್ಧಿಪಡಿಸ್ತಿದ್ದು,ರಷ್ಯಾ ಸೇನೆಯಲ್ಲಿ ಗೇಮ್‌ ಚೇಂಜರ್‌ ಆಗಿ ಕೆಲಸ ಮಾಡಲಿದೆ ಅಂತ ರಷ್ಯಾ ಹೇಳ್ತಿದೆ. ಜೊತೆಗೆ ಈ ಹೊಸ ಆಯುಧ ಅಮೆರಿಕದ ಯಾವುದೇ ಅಸ್ತ್ರವನ್ನ ಕೂಡ ಹೊಡೆದು ಕೆಡವುತ್ತೆ. ಅದು ಸ್ಟೆಲ್ತ್‌ ವಿಮಾನ ಇರಬೋದು, ಲೋ-ಆರ್ಬಿಟ್‌ ಸ್ಯಾಟಲೈಟ್‌ ಇರಬೋದು, ಅಥವಾ ಹೈಪರ್‌ ಸಾನಿಕ್‌ ಮಿಸೈಲ್‌ ಇರಬೋದು ಎಲ್ಲವನ್ನೂ ಹೊಡೆದಾಕುತ್ತೆ ಅಂತ ರಷ್ಯಾ ಹೇಳ್ತಿದೆ.

ಅಂದ್ಹಾಗೆ 2007ರಲ್ಲಿ ರಷ್ಯಾದ S-400 ಏರ್‌ ಡಿಫೆನ್ಸ್‌ ಸಿಸ್ಟಮ್‌ನ್ನ ಯಶಸ್ವಿಯಾಗಿ ನಿಯೋಜನೆ ಮಾಡಲಾಯ್ತು. ಇದಾದ ಬಳಿಕ 2010ರಲ್ಲೇ ಈ S-500 ಏರ್‌ ಡಿಫೆನ್ಸ್‌ನ್ನ ಅಭಿವೃದ್ಧಿ ಪಡಿಸೋಕೆ ಪ್ರಾರಂಭಿಸಲಾಗಿತ್ತು. ಇದರ ಡಿಸೈನ್‌ನ್ನ 2011ರಲ್ಲಿ ಪೂರ್ಣಗೊಳಿಸಲಾಯ್ತು. ಆದ್ರೆ ನಂತ್ರ ಇದ್ರ ತಯಾರಿಯಲ್ಲಿ ಸ್ವಲ್ಪ ಡಿಲೇ ಅಗಿದ್ದು…. ಕೆಲ ತಜ್ಞರು ರಷ್ಯಾ ಇದನ್ನ ಬೇಕಂತಲೇ ಡಿಲೇ ಮಾಡ್ತಿದೆ. ತನ್ನ S-400 ಸಿಸ್ಟಮ್‌ಗೆ ಸಿಗ್ತಿರೋ ಡಿಮಾಂಡ್‌ಗೆ ಪ್ರಾಮುಖ್ಯತೆ ನೀಡ್ತಿದೆ ಅಂತ ಹೇಳಿದ್ರು. ಆದ್ರೆ ಕೊನೆಗೂ ಈಗ S-500 ಸಿಸ್ಟಮ್‌ ರಷ್ಯಾ ಸೇನೆಗೆ ನಿಯೋಜನೆಗೊಳ್ಳೊಕೆ ಕಾಲ ಕೂಡ್ಬಂದಿದೆ. ಇನ್ನು 2018ರಲ್ಲಿ ರಷ್ಯಾ S-500 ಸಿಸ್ಟಮ್‌ನ ಯಶಸ್ವಿಯಾಗಿ ಟೆಸ್ಟಿಂಗ್‌ ಮಾಡಿತ್ತು. ಸುಮಾರು 482 ಕಿಮೀ ದೂರದಲ್ಲಿರೋ ಟಾರ್ಗೆಟ್‌ಗಳನ್ನ ಹೊಡೆದುರುಳಿಸಿತ್ತು. ನಂತ್ರ ಇದೇ ವರ್ಷ S-500 ಯಶಸ್ವಿಯಾಗಿ ಹೈಪರ್‌ಸಾನಿಕ್‌ ವೆಪನ್‌ಗಳ ಟಾರ್ಗೆಟ್‌ನ್ನ ಟ್ರ್ಯಾಕ್‌ ಮಾಡಿ ತಡೆಹಿಡಿದಿರೋದಾಗಿ ವರದಿಯಾಗಿತ್ತು. ಈಗ ಅಫಿಷಿಯಲ್‌ ಆಗಿ ಸೇನೆಗೆ ಸೇರಿಸಿಕೊಳ್ಳೋಕೆ ರಷ್ಯಾ ತಯಾರಾಗಿದೆ. ಇನ್ನು ರಷ್ಯಾ S-400 ಸಿಸ್ಟಮ್‌ನ್ನ ಬೇರೆ ದೇಶಗಳಿಗೆ ಎಕ್ಸ್‌ಪೋರ್ಟ್‌ ಮಾಡೋಕೆ ರಷ್ಯಾ ಪ್ರಮೋಟ್‌ ಮಾಡ್ತಿದ್ದು, ಈಗಾಗಲೇ ಸಾಕಷ್ಟು ರಾಷ್ಟ್ರಗಳ ಜೊತೆ ಒಪ್ಪಂದ ಕೂಡ ಮಾಡ್ಕೊಂಡಿದೆ. ಈಗಾಗಲೇ ಭಾರತಕ್ಕೆ ಮೂರು S-400 ಸಿಸ್ಟಮ್‌ಗಳನ್ನ ರಷ್ಯಾ ಎಕ್ಸ್‌ಪೋರ್ಟ್‌ ಮಾಡಿದ್ದು ಉಳಿದಿದ್ದನ್ನ 2025ರೊಳಗೆ ನೀಡೋದಾಗಿ ರಷ್ಯಾ ಇತ್ತಿಷೆಗಷ್ಟೇ ಹೇಳಿತ್ತು.

-masthmagaa.com

Contact Us for Advertisement

Leave a Reply