ವಿರೋಧಿಗಳೇ ಇಲ್ಲದೇ ಗೆದ್ದ ಜೈಶಂಕರ್‌!

masthmagaa.com:
ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು TMC ನಾಯಕ ಡೆರೆಕ್ ಒ’ಬ್ರೇನ್ ಸೇರಿದಂತೆ 11 ಅಭ್ಯರ್ಥಿಗಳು ಈ ತಿಂಗಳು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಜುಲೈ 24ರಂದು ನಡೆಯಲಿರುವ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 6 ಸ್ಥಾನಗಳು, ಗುಜರಾತ್‌ನ 3 ಸ್ಥಾನಗಳು ಹಾಗೂ ಗೋವಾದ ಒಂದು ಸೀಟಿಗೆ ಕೇವಲ ಒಬ್ಬರೇ ಕಣದಲ್ಲಿರೋದ್ರಿಂದ ವೋಟಿಂಗ್‌ ನಡೆಯೋದಿಲ್ಲ. ಅಂದ್ಹಾಗೆ ಜೈಶಂಕರ್‌ ಅವ್ರು ಎರಡನೇ ಬಾರಿಗೆ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ.

-masthmagaa.com

Contact Us for Advertisement

Leave a Reply