ಮಿಸ್‌ ಯೂನಿವರ್ಸ್‌ನಲ್ಲಿ ಮೊದಲ ಬಾರಿಗೆ ಸೌದಿ ಅರೇಬಿಯಾ ಮಹಿಳೆ ಸ್ಪರ್ಧೆ!

masthmagaa.com:

ಐತಿಹಾಸಿಕ ಬೆಳವಣಿಗೆಯಲ್ಲಿ ಸೌದಿ ಅರೇಬಿಯಾದ ಮಹಿಳೆ ಒಬ್ರು ಮಿಸ್‌ ಯೂನಿವರ್ಸ್‌ ಬ್ಯೂಟಿ ಕಾಂಟೆಸ್ಟ್‌ನಲ್ಲಿ ಭಾಗವಹಿಸಲಿದ್ದಾರೆ. 2024ರಲ್ಲಿ ಅಂದ್ರೆ ಇದೇ ವರ್ಷ, ಮೊದಲ ಬಾರಿಗೆ ಸೌದಿ ಈ ಕಾಂಪಿಟೇಶನ್‌ಗೆ ತನ್ನ ದೇಶದ ರೂಪದರ್ಶಿಯೊಬ್ರನ್ನ ಕಳಿಸೋಕೆ ಡಿಸೈಡ್‌ ಮಾಡಿದೆ. 27 ವರ್ಷದ ರ್ಯೂಮಿ ಅಲ್ಖತ್ತಾನಿ, ಸೌದಿ ಪರವಾಗಿ ಭಾಗವಹಿಸೋಕೆ ರೆಡಿಯಾಗಿದ್ದಾರೆ. ಈಗಾಗ್ಲೆ ಇವ್ರು ಮಿಸ್‌ ಮಿಡ್ಲ್ ಈಸ್ಟ್‌ ಹಾಗೂ ಮಿಸ್‌ ಅರಬ್‌ ವರ್ಲ್ಡ್‌ ಪೀಸ್‌, 2021 ಅನ್ನೋ ಕಿರೀಟಗಳನ್ನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈಗ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಇವ್ರು ಸೌದಿಯನ್ನ ರೆಪ್ರೆಸೆಂಟ್‌ ಮಾಡಲಿದ್ದಾರೆ. ಈ ಮೂಲಕ ಸೌದಿ ಕ್ರೌನ್‌ ಪ್ರಿನ್ಸ್‌ ಮೊಹಮದ್‌ ಬಿನ್‌ ಸಲ್ಮಾನ್‌ರ ಸುಧಾರಣೆಗಳ ಲಿಸ್ಟ್‌ಗೆ ಈ ವಿಚಾರವೂ ಸೇರ್ಕೊಂಡಿದೆ. ಅಂದ್ಹಾಗೆ ಈ ಮುಂಚೆ ಕೂಡ ಮಹಿಳೆಯರಿಗೆ ಡ್ರೈವಿಂಗ್‌ ಲೈಸೆನ್ಸ್‌ ಕೊಡೋದ್ರಿಂದ ಹಿಡಿದು ಮಹಿಳೆಯರನ್ನ ಬಾಹ್ಯಾಕಾಶಕ್ಕೇ ಕಳುಹಿಸಿ ಕೊಡೋ ಎಲ್ಲಾ ನಿರ್ಧಾರಗಳನ್ನ ಎಂಬಿಎಸ್‌ ಮಾಡಿದ್ರು. ಈಗ ಅದರ ಮುಂದುವರೆದ ಭಾಗವಾಗಿ ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲೂ ಸೌದಿ ಮಹಿಳೆಯರೂ ಭಾಗವಹಿಸ್ತಿದ್ದಾರೆ.

-masthmagaa.com

Contact Us for Advertisement

Leave a Reply