ಬ್ರಹ್ಮಾಂಡದಿಂದ ಬರುತ್ತಿದೆ ಶಬ್ದ! ಏನದು?

masthmagaa.com:

ಮೊದಲ ಬಾರಿಗೆ ಗುರುತ್ವಾಕರ್ಷಣೆಯ ಅಲೆಯ ಬಗ್ಗೆ ಕಲ್ಪನೆ ನೀಡಿದ್ದ ಆಲ್ಬರ್ಟ್ ಐನ್‌ಸ್ಟೈನ್‌ರ ಪ್ರಸ್ತಾಪವನ್ನ ವಿಜ್ಞಾನಿಗಳ ತಂಡವೊಂದು ಕನ್ಫರ್ಮ್‌ ಮಾಡಿದ್ದಾರೆ. ಕಡಿಮೆ ಫ್ರೀಕ್ವೆನ್ಸಿಯ ಗುರುತ್ವಾಕರ್ಷಣೆಯ ಅಲೆಗಳಿಂದ ಬ್ರಹ್ಮಾಂಡದಲ್ಲಿ ಒಂದು ರೀತಿ ಶಬ್ದ ಉಂಟಾಗ್ತಿದ್ದು, ನಾವು ಅದನ್ನ ಕೇಳಿಸಿಕೊಳ್ಳಬಹುದು ಅಂತ ವಿಜ್ಞಾನಿಗಳು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಬ್ರಹ್ಮಾಂಡದಲ್ಲಿ ಸ್ಲೋ ಮ್ಯೂಸಿಕ್‌ ತರ ಕೇಳಿಸೋ ಶಬ್ದಕ್ಕೆ ನಮಗೆ ಎವಿಡೆನ್ಸ್‌ ಸಿಕ್ಕಿದೆ. ಇನ್ನು ಕಡಿಮೆ ಫ್ರೀಕ್ವೆನ್ಸಿ ಇರೋ ಗ್ರಾವಿಟೇಷನಲ್‌ ಅಲೆಗಳು ಈ ಬ್ರಹ್ಮಾಂಡವನ್ನ ವ್ಯಾಪಿಸಿರೋ ಕಾಸ್ಮಿಕ್‌ ಹಿನ್ನಲೆಯಲ್ಲಿ ʻHumʼ ಶಬ್ದವನ್ನ ಸೃಷ್ಟಿಸುತ್ತಿದೆ. ಜೊತೆಗೆ ಈ ಅಲೆಗಳಿಂದಲೇ ಬಾಹ್ಯಾಕಾಶ ತುಂಬಿದೆ ಅನ್ನೋದು ಸಂಶೋಧನೆಯಿಂದ ತಿಳಿದು ಬಂದಿದೆ. ಅಲ್ದೆ ಕಪ್ಪುಕುಳಿಗಳು ರಿಲೀಸ್‌ ಮಾಡೋ ಗ್ರಾವಿಟೃಷನಲ್‌ ವೇವ್‌ಗಳಿಂದ ಈ ಶಬ್ದ ಉತ್ತಪತ್ತಿಯಗುತ್ತಿದೆ ಅನ್ನೋದು ತಿಳಿದು ಬಂದಿದೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಅಂದ್ಹಾಗೆ ಗುರುತ್ವಾಕರ್ಷಣೆಯ ಅಲೆಗಳು ಅಥ್ವಾ ಬಾಹ್ಯಾಕಾಶದಲ್ಲಿ ಅಲೆಗಳ ಅಸ್ತಿತ್ವವನ್ನ ಐನ್‌ಸ್ಟೀನ್‌ ಅವ್ರು 1916ರಲ್ಲೇ ತಮ್ಮ ಸಾಪೇಕ್ಷತ ಸಿದ್ಧಾಂತ (Theory of relativity) ದಲ್ಲಿ ವಿವರಿಸಿದ್ದರು.

-masthmagaa.com

 

Contact Us for Advertisement

Leave a Reply