ಇಂಗ್ಲೆಂಡ್‌ ವಿರುದ್ದದ ಎರಡನೇ ಟಿ-20 ಪಂದ್ಯ: ಕೊಹ್ಲಿ ಕೈ ಬಿಡ್ತಾರಾ ಕ್ಯಾಪ್ಟನ್‌ ರೋಹಿತ್‌?

masthmagaa.com:

ನಾಳೆ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಎರಡನೇ ಟಿ-20 ಪಂದ್ಯ ಬರ್ಮಿಂಗ್‌ ಹ್ಯಾಮ್‌ನಲ್ಲಿ ನಡೆಯಲಿದೆ. ನೆನ್ನೆ ನಡೆದ ಮೊದಲ ಪಂದ್ಯದಲ್ಲಿ ಭಾರತ 50 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಐಪಿಎಲ್‌ ಗೆದ್ದ ಫಾರ್ಮ್‌ನಲ್ಲಿರೋ ಹಾರ್ದಿಕ್‌ ಪಾಂಡ್ಯ ಅರ್ಧಶತಕ ಬಾರಿಸಿ ಜೊತೆಗೆ ನಾಲ್ಕು ವಿಕೆಟ್‌ ಬೇರೆ ಕಿತ್ತು ಆಲ್‌ರೌಂಡರ್‌ ಪ್ರದರ್ಶನ ನೀಡಿದ್ದಾರೆ. ಇನ್ನು ಅತ್ತ ದೀಪಕ್‌ ಹೂಡಾ, ಸೂರ್ಯ ಕುಮಾರ್‌ ಯಾದವ್‌ ಮತ್ತು ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ ಕೂಡ ಉತ್ತಮ ಪ್ರದರ್ಶನ ನೀಡಿರೋದ್ರಿಂದ ನಾಳಿನ ಪಂದ್ಯದಲ್ಲಿ ಕ್ಯಾಪ್ಟನ್‌ ರೋಹಿತ್ ಇದ್ರಲ್ಲಿ ಯಾರನ್ನ ಡ್ರಾಪ್‌ ಮಾಡ್ಬೇಕು ಅಂತ ತಲೆಬಿಸಿಯಾಗಿದೆ. ಯಾಕಂದ್ರೆ ನಾಳೆ ಪಂದ್ಯದಲ್ಲಿ ಹಿರಿಯ ಆಟಗಾರರಾದ ಕೋಹ್ಲಿ, ಪಂತ್‌, ಜಡೇಜಾ, ಬೂಮ್ರಾ ವಾಪಸ್‌ ಆಗಲಿದ್ದಾರೆ.

-masthmagaa.com

Contact Us for Advertisement

Leave a Reply