ಇಂಡೋ-ಪೆಸಿಫಿಕ್‌ ಪ್ರದೇಶವೇ 2+2 ಮೀಟಿಂಗ್‌ನ ಧ್ಯೇಯ ಉದ್ದೇಶ: ಜೈಶಂಕರ್

masthmagaa.com:

ಇಂಡೋ-ಪೆಸಿಫಿಕ್‌ ಪ್ರದೇಶದ ಭದ್ರತೆಯೇ ಭಾರತ-ಅಮೆರಿಕಗಳ 2+2 ಮೀಟಿಂಗ್‌ನ ಮೊದಲ ಆದ್ಯತೆ ಅಂತ ವಿದೇಶಾಂಗ ಸಚಿವ ಎಸ್.‌ ಜೈಶಂಕರ್‌ ಹೇಳಿದ್ದಾರೆ. ದೆಹಲಿಯಲ್ಲಿ ಇಂದು ಉಭಯ ದೇಶಗಳ ವಿದೇಶಾಂಗ ಹಾಗೂ ರಕ್ಷಣಾ ಸಚಿವರನ್ನು ಒಳಗೊಂಡ 2+2 ಮೀಟಿಂಗ್‌ ವೇಳೆ ಮಾತನಾಡಿದ ಅವರು “ಎರಡೂ ದೇಶಗಳ ಕಾರ್ಯತಂತ್ರಗಳು, ರಕ್ಷಣೆ, ಟೆಕ್ನಾಲಜಿ ಮತ್ತು ವ್ಯಾಪಾರ ಸಂಬಂಧಗಳ ಬಗ್ಗೆ ಚರ್ಚೆ ಮಾಡ್ತೇವೆ. ಇಂಡೋ ಪೆಸಿಫಿಕ್‌ ಪ್ರದೇಶದ ಭದ್ರತೆ, ಅಭಿವೃದ್ಧಿ ಜೊತೆಗೆ ಯುಕ್ರೇನ್‌, ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಬಗ್ಗೆ ಮಾತನಾಡಲಿದ್ದೇವೆ” ಅಂದಿದ್ದಾರೆ. ಈ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌, ಭಾರತ ಅಮೆರಿಕಗಳ ದ್ವಿಪಕ್ಷೀಯ ಸಂಬಂಧಕ್ಕೆ ಮಿಲಿಟರಿ ಸಹಕಾರವೇ ಆಧಾರ ಸ್ಥಂಭವಾಗಿದೆ. ಈಗಿನ ಜಿಯೊಪೊಲಿಟಿಕಲ್‌ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ನಾವು ಲಾಂಗ್‌-ಟರ್ಮ್‌ ಸಮಸ್ಯೆಗಳ ಬಗ್ಗೆ ಫೋಕಸ್‌ ಮಾಡ್ಬೇಕಿದೆ ಅಂತೇಳಿದ್ದಾರೆ. ಇನ್ನು Quad ಭದ್ರತಾ ಸಂವಾದದಿಂದ ಉಭಯ ದೇಶಗಳ ಸಹಕಾರವನ್ನ ಬೂಸ್ಟ್‌ ಮಾಡೋದ್ರ ಜೊತೆಗೆ ಇಂಡೋ ಪೆಸಿಫಿಕ್‌ನಲ್ಲಿ ಸಮನ್ವಯ ಕಾಪಾಡುವಲ್ಲಿ ಭಾರತ ಅಮೆರಿಕ ಒಟ್ಟಾಗಿ ಕೆಲಸ ಮಾಡಿವೆ ಅಂತ ಅಮೆರಿಕ ಸೆಕ್ರೆಟರಿ ಆಫ್‌ ಸ್ಟೇಟ್‌ ಆಂಟನಿ ಬ್ಲಿಂಕನ್‌ ಹೇಳಿದ್ದಾರೆ. ಡಿಫೆನ್ಸ್‌ ಸೆಕ್ರೆಟರಿ ಲಾಯ್ಡ್‌ ಆಸ್ಟಿನ್‌ ಮಾತನಾಡಿ ʼನಮ್ಮ ಹಾಗೂ ಭಾರತದ ಸಹಕಾರ ಸಾಗರ ತಟದಿಂದ ಹಿಡಿದು ಬಾಹ್ಯಾಕಾಶದವರೆಗಿದೆ. ನಾವು ನಮ್ಮ ಕೈಗಾರಿಕಾ ನೆಲೆಗಳನ್ನ ಇಂಟಿಗ್ರೇಟ್‌ ಮಾಡೋದರ ಜೊತೆಗೆ, ತಂತ್ರಜ್ಞಾನಗಳನ್ನ ಶೇರ್‌ ಮಾಡಿಕೊಳ್ತಿದ್ದೀವಿʼ ಅಂದಿದ್ದಾರೆ. ಇನ್ನು ಇದೇ ವೇಳೆ ಭಾರತ-ಕೆನಡಾ ಸಂಘರ್ಷದ ಬಗ್ಗೆ ಮಾತನಾಡಿರೊ ಆಂಟನಿ ಬ್ಲಿಂಕನ್‌, ಎರಡೂ ದೇಶಗಳು ನಮ್ಮ ಸ್ನೇಹಿತರೇ. ಕೆನಡಾ ಈ ಬಗ್ಗೆ ತನಿಖೆ ಮಾಡ್ಬೇಕು. ಮತ್ತು ಭಾರತ ಕೆನಡಾದೊಂದಿಗೆ ತನಿಖೆಯಲ್ಲಿ ಕೈಜೋಡಿಸೋ ಮೂಲಕ ಉಭಯ ದೇಶಗಳ ನಡುವಿನ ಕಲಹವನ್ನ ದೂರ ಮಾಡುವತ್ತ ಕೆಲಸ ಮಾಡ್ಬೇಕುʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply