masthmagaa.com:

ದೇಶದಲ್ಲಿ ನಾಡಿದ್ದು ಶನಿವಾರದಿಂದ ಕೊರೋನಾ ಲಸಿಕೆಯ ಅಭಿಯಾನ ಶುರುವಾಗಲಿರೋ ಬೆನ್ನಲ್ಲೇ ಕೇಂದ್ರ ಸರ್ಕಾರ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದ ‘ಕೋವಿಶೀಲ್ಡ್​’ ಲಸಿಕೆಗೆ ಆರ್ಡರ್ ಕೊಟ್ಟಿದೆ. ಮೂಲಗಳ ಪ್ರಕಾರ 1 ಕೋಟಿ 10 ಲಕ್ಷ ಡೋಸ್​ಗಳಿಗೆ ಆರ್ಡರ್ ಕೊಡಲಾಗಿದೆ. ಲಸಿಕೆಯ ಒಂದು ಡೋಸ್​ಗೆ ಜಿಎಸ್​ಟಿ ಎಲ್ಲಾ ಸೇರಿ 210 ರೂಪಾಯಿ ಆಗಲಿದೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಕೋವಿಶೀಲ್ಡ್ ಲಸಿಕೆ ಪೂರೈಕೆಯಾಗಲಿದೆ. ಪುಣೆಯ ಸೆಂಟ್ರಲ್ ಹಬ್​ನಿಂದ ದೇಶದ 60 ಕಡೆ ಈ ಲಸಿಕೆ ಪೂರೈಕೆಯಾಗಿ ಅಲ್ಲಿಂದ ಉಳಿದ ಕಡೆ ಪೂರೈಕೆಯಾಗಲಿದೆ ಅಂತ ಹೇಳಲಾಗ್ತಿದೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಭಾರತ್ ಬಯೋಟೆಕ್​ನ ‘ಕೋವಾಕ್ಸಿನ್​’ ಲಸಿಕೆಗೂ ಆರ್ಡರ್ ಪ್ಲೇಸ್ ಮಾಡಲಿದೆ. ಈ ಎರಡೂ ಲಸಿಕೆಗಳಿಗೆ ಜನವರಿ 3ರಂದು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (DCGI) ಅನುಮೋದನೆ ಕೊಟ್ಟಿತ್ತು.

-masthmagaa.com

Contact Us for Advertisement

Leave a Reply