ಭಾರತ ಮೂಲದ ಶೆಫಾಲಿ ಈಗ ನೆದರ್‌ಲ್ಯಾಂಡ್‌ನ ಅಮೆರಿಕದ ರಾಯಭಾರಿ!

masthmagaa.com:

ಅಮೆರಿಕನ್‌ ಪೊಲಿಟಿಕಲ್‌ ಆಕ್ಟಿವಿಸ್ಟ್‌ ಭಾರತ ಮೂಲದ ಶೆಫಾಲಿ ರಾಜ್ಧಾ ದುಗ್ಗಲ್‌ರನ್ನ ನೆದರ್ಲ್ಯಾಂಡ್‌ನ ಅಮೆರಿಕ ರಾಯಭಾರಿಯನ್ನಾಗಿ ನಿಯೋಜಿಸಲಾಗಿದೆ. 50 ವರ್ಷದ ದುಗ್ಗಲ್‌ ಅವರ ನೇಮಕಕ್ಕೆ ಸಂಬಂಧಪಟ್ಟಂತೆ ಅಮೆರಿಕದ ಸಂಸತ್‌ನಲ್ಲಿ ಅಂಗೀಕಾರ ಸಿಕ್ಕಿದೆ. ಅಂದ್ಹಾಗೆ ಕಾಶ್ಮೀರ ಪಂಡಿತ ಸಮುದಾಯಕ್ಕೆ ಸೇರಿದ ಇವರು ಹುಟ್ಟಿದ್ದು ಹರಿದ್ವಾರದಲ್ಲಿ. ಎರಡು ವರ್ಷ ಇದ್ದಾಗಲೇ ಕುಟುಂಬದೊಂದಿಗೆ ವಲಸೆ ಹೋಗಿ ಅಮೆರಿಕದಲ್ಲಿ ನೆಲೆಸಿದ್ರು. ಮಹಿಳಾ ಹಕ್ಕುಗಳ ಪರ ಹೋರಾಟಗಾರ್ತಿಯಾಗಿರೋ ಇವರು ಪಾಶ್ಚಿಮಾತ್ಯ ಪ್ರಾದೇಶಿಕ ಸಲಹೆಗಾರರಾಗಿಯೂ ಸೇವೆ ಸಲ್ಲಿಸ್ತಿದ್ದಾರೆ.

-masthmagaa.com

Contact Us for Advertisement

Leave a Reply