ಅಡುಗೆ ಅನಿಲದ ಬೆಲೆಯಲ್ಲಿ ಮತ್ತೆ 15 ರೂಪಾಯಿ ಏರಿಕೆ

masthmagaa.com:

ಅಡುಗೆ ಅನಿಲದ ಬೆಲೆಯಲ್ಲಿ ಮತ್ತೆ 15 ರೂಪಾಯಿ ಏರಿಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆ ಜಾಸ್ತಿಯಾಗಿದ್ದರಿಂದ ಈ ರೀತಿ ಬೆಲೆ ಏರಿಕೆ ಮಾಡಲಾಗಿದೆ. ಇದ್ರಿಂದ ಒಂದು ಸಿಲಿಂಡರ್ ಅಡುಗೆ ಅನಿಲದ ಬೆಲೆ ಬೆಂಗಳೂರಲ್ಲಿ 900 ರೂಪಾಯಿ ಗಡಿ ದಾಟಿ, 902 ರೂಪಾಯಿ ಆದಂತಾಗಿದೆ. ಅದೇ ರೀತಿ ಪೆಟ್ರೋಲ್ ಪ್ರತಿ ಲೀಟರ್​​ಗೆ 26 ಪೈಸೆ ಏರಿಕೆಯಾಗಿ 106 ರೂಪಾಯಿ 17 ಪೈಸೆಯಾಗಿದೆ. ಅದೇ ರೀತಿ ಡೀಸೆಲ್ 32 ಪೈಸೆ ಜಾಸ್ತಿಯಾಗಿ 96 ರೂಪಾಯಿ 62 ಪೈಸೆಯಾಗಿದೆ.

-masthmagaa.com

Contact Us for Advertisement

Leave a Reply