ಹಿಂದೂ ಸಮುದಾಯದವ್ರ ಮೇಲಿನ ದಾಳಿಗೆ ಅಮೆರಿಕ ಕಳವಳ!

masthmagaa.com:

ಅಮೆರಿಕದಲ್ಲಿ ಹಿಂದೂ ಸಮುದಾಯದವ್ರ ಮೇಲೆ ದಾಳಿ ನಡೆಯೋದು ಜಾಸ್ತಿಯಾಗ್ತಿದೆ ಅಂತ ಇದೀಗ ಅಮೆರಿಕದಲ್ಲೇ ಕಳವಳ ವ್ಯಕ್ತವಾಗಿದೆ. ಪ್ರೆಸ್‌ ಕಾನ್ಫರೆನ್ಸ್‌ ಒಂದ್ರಲ್ಲಿ ಭಾರತೀಯ ಮೂಲದ ಅಮೆರಿಕನ್‌ ಸಂಸದರಾದ ಥಾನೇದಾರ್‌ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಇದು ಸಂಘಟಿತ ಹಿಂದೂ ವಿರೋಧಿ ದಾಳಿಯ ಆರಂಭ ಅಂತ ಕರೆದಿದ್ದಾರೆ. ʻಅಮೆರಿಕದಾದ್ಯಂತ ಹಿಂದೂ ದೇವಾಲಯಗಳ ಮೇಲೆ ಹಲವಾರು ದಾಳಿ ನಡೀತಿರೋದನ್ನ ನಾವು ನೋಡಿದ್ದೇವೆ. ಸೋ ಇದನ್ನ ತಡೀಬೇಕಾಗಿದೆ….ನಮಗೆ ಸಪೋರ್ಟ್‌ ಬೇಕು. ಹಿಂದೂ ಸಮುದಾಯದವ್ರು ಭಯದಲ್ಲಿ ಜೀವನ ಸಾಗಿಸ್ತಿದ್ದಾರೆ. ಹಿಂದೂಗಳ ಮೇಲಿನ ದಾಳಿ ವಿಚಾರವಾಗಿ ಇಲ್ಲಿನ ಪೊಲೀಸರು ಸರಿಯಾಗಿ ಕ್ರಮ ತೆಗೆದುಕೊಂಡಿಲ್ಲ. ಅಪರಾಧಿಗಳನ್ನ ಅರೆಸ್ಟ್‌ ಮಾಡಲೇ ಇಲ್ಲ. ಈ ಸಮಸ್ಯೆಗೆ ಯಾವ್ದೇ ರೀತಿ ಪರಿಹಾರವೂ ನೀಡಿಲ್ಲ. ಸೋ…ಸಮಯ ಬಂದಿದೆ, ನಾನು ನಿಮ್ಮೊಂದಿಗೆ ನಿಲ್ಲುತ್ತೇನೆʼ ಅಂತ ಹಿಂದೂಗಳ ಮೇಲಾಗ್ತಿರೋ ದಾಳಿ ಖಂಡಿಸಿ ಮಾತನಾಡಿದ್ದಾರೆ.

-masthmagaa.com

Contact Us for Advertisement

Leave a Reply