ನಾವು ಕೆಲಸ ಮಾಡಲು ಬಿಡ್ತಿರೋದೇ ಆಶ್ಚರ್ಯದ ವಿಚಾರ: ಅಫ್ಘಾನ್ ಸುದ್ದಿ ಸಂಸ್ಥೆ

masthmagaa.com:

ತಾಲಿಬಾನಿಗಳು ಅಧಿಕಾರಕ್ಕೆ ಬರ್ತಿದ್ದಂತೆ ನಾವು ಮಾಧ್ಯಮಗಳಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡ್ತೀವಿ ಅಂತ ಹೇಳಿದ್ದಾರೆ. ಈ ಬಗ್ಗೆ ಅಫ್ಘಾನಿಸ್ತಾನದ ಮೊದಲ ಸ್ವತಂತ್ರ ಮಾಧ್ಯಮ ಸಂಸ್ಥೆಯ ಮುಖ್ಯಸ್ಥ ಸಾದ್ ಮೊಹ್ಸೇನಿ ಪ್ರತಿಕ್ರಿಯಿಸಿದ್ದಾರೆ. ತಾಲಿಬಾನಿಗಳನ್ನು ದೋಹಾದಲ್ಲಿ ಭೇಟಿಯಾದಾಗ ಸ್ಥಳೀಯ ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಬಿಡ್ತೀವಿ ಅಂದಿದ್ರು. ನಾವು ತಾಲಿಬಾನ್ ಟೇಕೋವರ್ ಬಳಿಕವೂ ಕಾರ್ಯ ನಿರ್ವಹಿಸುತ್ತಿರೋದು ತುಂಬಾ ಆಶ್ಚರ್ಯಕರ ವಿಚಾರವಾಗಿದೆ. ಆದ್ರೂ ನಾವು ಯಾವುದನ್ನೂ ಲಘುವಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಮುಂದಿನ ದಾರಿ ದೊಡ್ಡದಿದೆ. ತಾಲಿಬಾನಿಗಳು ಮಾಧ್ಯಮಗಳನ್ನು ಹೇಗೆ ನೋಡ್ತಾರೆ ಅನ್ನೋದು ನಮಗೆ ಗೊತ್ತಿದೆ ಅಂತ ಹೇಳಿದ್ದಾರೆ. ಅಂದಹಾಗೆ ಈ ಟೋಲೋ ನ್ಯೂಸ್ ಅಫ್ಘಾನಿಸ್ತಾನದ ಒಂದು ಸುದ್ದಿ ಸಂಸ್ಥೆ. ಇದ್ರಲ್ಲಿ ತಾಲಿಬಾನ್​ಗಳ ಟೇಕೋವರ್​​ವರೆಗೆ ಸುದ್ದಿಗಳು ಸರಿಯಾಗಿಯೇ ಬರ್ತಿದ್ವು. ಆದ್ರೆ ಟೇಕೋವರ್ ಆಗ್ತಿದ್ದಂತೆ ತಾಲಿಬಾನಿಗಳ ವಿರುದ್ಧದ ಸುದ್ದಿಗಳು ಬರೋದು ನಿಂತುಬಿಟ್ಟಿದೆ.

-masthmagaa.com

Contact Us for Advertisement

Leave a Reply