ಭಾರತ್‌ ಜೋಡೊ ಯಾತ್ರೆಯಲ್ಲಿ ಪುತ್ರನ ಜೊತೆ ಹೆಜ್ಜೆ ಹಾಕಿದ ಸೋನಿಯಾ ಗಾಂಧಿ!

masthmagaa.com:

ದಸರಾ ಹಬ್ಬದ ಬಿಡುವಿನ ನಂತರ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಿಂದ ಭಾರತ್‌ ಜೋಡೊ ಪಾದಯಾತ್ರೆ ಮತ್ತೆ ಶುರುವಾಗಿದೆ. ಇಂದು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ. ಆರೋಗ್ಯ ಸಮಸ್ಯೆಗಳಿಂದ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಸೋನಿಯಾ, ದೀರ್ಘ ಸಮಯದ ನಂತರ ಭಾರತ್‌ ಜೋಡೊದಲ್ಲಿ ಪಾಲ್ಗೊಂಡಿದ್ದಾರೆ. ಸ್ವಲ್ಪ ದೂರ ನಡೆದು ಸೋನಿಯಾ ಗಾಂಧಿ ಕಾರ್‌ ಹತ್ತಿ ಹೋಗಿದ್ದಾರೆ. ನಂತರ ಮತ್ತೆ ಯಾತ್ರೆಗೆ ಮರಳಿದ್ದಾರೆ. ಬಿಜೆಪಿ ಆಡಳಿತವಿರೊ ರಾಜ್ಯದಲ್ಲಿ ಪಕ್ಷದ ಸ್ಥಾನವನ್ನ ಗಟ್ಟಿಗಳಿಸೋ ನಿಟ್ಟಿನಲ್ಲಿ ಅವ್ರು ಬಳ್ಳಾರಿಯಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡೋ ನಿರೀಕ್ಷೆಯಿದೆ ಎನ್ನಲಾಗಿದೆ. ಅಕ್ಟೋಬರ್‌ 3ರಂದೇ ರಾಜ್ಯಕ್ಕೆ ಬಂದಿರೊ ಸೋನಿಯಾ ಗಾಂಧಿ, ಹೆಚ್‌.ಡಿ ತಾಲೂಕಿನ ಬೀರಂಬಳ್ಳಿಯ ಆರೆಂಜ್‌ ಕೌಂಟಿ ರೆಸಾರ್ಟ್‌ನಲ್ಲಿ ಪುತ್ರನೊಂದಿಗೆ 2 ದಿನಗಳ ಕಾಲ ಸ್ಟೇ ಆಗಿದ್ರು. ನಿನ್ನೆ ಬೇಗೂರು ಗ್ರಾಮದಲ್ಲಿರೊ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ರು. ಇನ್ನು ಪಾದಯಾತ್ರೆ ವೇಳೆ ಸೋನಿಯಾ ಅವ್ರ ಶೂ ಲೇಸ್‌ನ್ನ ರಾಹುಲ್‌ ಕಟ್ತಿರೊ ಫೋಟೊ ಒಂದನ್ನ ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದೆ. ಸೋನಿಯಾ ಅವ್ರು ಈ ಯಾತ್ರೆಯಲ್ಲಿ ಭಾಗಿಯಾಗಿರೋದು ಪಕ್ಷಕ್ಕೆ ಒಂದ್‌ ರೀತಿ ಹೆಮ್ಮೆ ಇದ್ದಂತೆ ಅಂತ ರಾಜ್ಯ ಕಾಂಗ್ರೆಸ್‌ನ ಮುಖ್ಯಸ್ಥ ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಇತ್ತ ಯಾತ್ರೆಯಲ್ಲಿ ಕಾಂಗ್ರೆಸ್‌ ನಾಯಕರಾದ ಸೋನಿಯಾ, ರಾಹುಲ್‌ ಮತ್ತು ಪ್ರಿಯಾಂಕ ಗಾಂಧಿಯವರು ರಾಜ್ಯಕ್ಕೆ ಭೇಟಿ ನೀಡೋದ್ರಿಂದ ಕರ್ನಾಟಕದಲ್ಲಿ ಯಾವ ಪರಿಣಾಮ ಆಗಲ್ಲ ಅಂತ ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ. ಸಾಮಾನ್ಯವಾಗಿ ಎಲ್ಲ ರಾಜಕೀಯ ಪಕ್ಷದ ನಾಯಕರು ಪಕ್ಷಕ್ಕಾಗಿ ಕೆಲಸ ಮಾಡೋದು ಸಹಜ. ಅದೇ ರೀತಿ ಸೋನಿಯಾ ಗಾಂಧಿ ಅವರು ಬಂದು ಅರ್ಧ ಕಿಲೋ ಮೀಟರ್‌ ನಡೆದು ವಾಪಾಸ್‌ ಆಗಿದ್ದಾರೆ. ಅದರಿಂದ ನಮಗೇನು ಆಗಬೇಕಿಲ್ಲ ಅಂತ ಸಿಎಂ ಟೀಕಿಸಿದ್ದಾರೆ. ಅಂದ್ಹಾಗೆ ಕಾಂಗ್ರೆಸ್‌ನಂತೆ ಬಿಜೆಪಿ ಕೂಡ ರ್ಯಾಲಿ ಮಾಡುತ್ತ ಅನ್ನೊ ಪ್ರಶ್ನೆಗೆ ಉತ್ತರಿಸಿದ ಅವರು ನಾವು ಮೊದಲೇ 6 ರ್ಯಾಲಿ ಮಾಡ್ಬೇಕು ಅಂತ ಪ್ಲಾನ್‌ ಮಾಡಿದ್ವಿ ದಸರಾ ಪ್ರಯುಕ್ತ ಮುಂದೆ ಹಾಕಿದ್ವಿ ಅಂತ ಹೇಳಿದ್ದಾರೆ. ಮೂಲಗಳ ಪ್ರಕಾರ ಭಾರತ್‌ ಜೋಡೊ ಯಾತ್ರೆಗೆ ಕೌಂಟರ್‌ ಕೊಡೋಕೆ ಬಿಜೆಪಿ ಕೂಡ ಅಕ್ಟೋಬರ್‌ 11ರಿಂದ ಯಾತ್ರೆ ಹಮ್ಮಿಕೊಳ್ಳಲಿದೆ, ಇದ್ರಲ್ಲಿ ಮಾಜಿ ಸಿಎಂ ಬಿಎಸ್‌ವೈ ಮತ್ತು ಹಾಲಿ ಸಿಎಂ ಬೊಮ್ಮಾಯಿ ಇಬ್ರು ಜಂಟಿಯಾಗಿ ಸುಮಾರು 40 ಕ್ಷೇತ್ರಗಳನ್ನ ಕವರ್‌ ಮಾಡಲಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply