ಕಿಮ್‌ ಹತ್ಯೆಗೆ ದಕ್ಷಿಣ ಕೊರಿಯಾದಲ್ಲಿ ಟ್ರೈನಿಂಗ್‌! ಅಮೆರಿಕ ಸಾಥ್‌!

masthmagaa.com:

2023ರಲ್ಲಿ ಈಗಾಗಲೇ ಎರಡು ಭೀಬತ್ಸ ಯುದ್ಧಗಳನ್ನ ಕಂಡ ಜಗತ್ತಿಗೆ ಈಗ ಹೊಸ ವರ್ಷ ಮತ್ತೊಂದು ಯುದ್ಧದ ಕಾರ್ಮೋಡದಿಂದ ಬರಮಾಡಿಕೊಳ್ತಿದೆ. ಯುಕ್ರೇನ್‌-ರಷ್ಯಾ, ಇಸ್ರೇಲ್‌-ಹಮಾಸ್‌ ನಂತ್ರ ಈಗ ಕೊರಿಯಾ ಕುಡಿಗಳಾದ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಕೂಡ ಸಂಘರ್ಷಕ್ಕಿಳಿಯೋ ಸಂದರ್ಭ ಎದುರಾಗಿದೆ. ಇದಕ್ಕೆಪೀಠಿಕೆ ಎಂಬಂತೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಹತ್ಯೆ ಮಾಡೋಕೆ ದಕ್ಷಿಣ ಕೊರಿಯಾ ಸೇನೆ ತರಬೇತಿ ನಡೆಸ್ತಿದೆ ಅನ್ನೋ ಸ್ಪೋಟಕ ವಿಚಾರ ದಕ್ಷಿಣ ಕೊರಿಯಾದ ರಕ್ಷಣಾ ಸಚಿವನ ಬಾಯಿಂದಲೇ ಬಂದಿದೆ. ಟಿವಿ ಇಂಟರ್‌ವ್ಯೂ ಒಂದ್ರಲ್ಲಿ ಮಾತಾಡಿರೋ ದಕ್ಷಿಣ ಕೊರಿಯಾದ ರಕ್ಷಣಾ ಸಚಿವ ಶಿನ್‌ ವೊನ್‌-ಸಿಕ್‌, ʻಈ ರೀತಿ ಹತ್ಯೆ ಮಾಡೋ ವಿಚಾರವನ್ನ ಓಪನ್‌ ಆಗಿ ಚರ್ಚೆ ಮಾಡೋದು ಕಷ್ಟ. ಆದ್ರೆ ಈಗಾಗ್ಲೆ ಕೊರಿಯನ್‌ ರಿಪಬ್ಲಿಕ್-ಅಮೆರಿಕ ಸಹಯೋಗದ ವಿಶೇಷ ಪಡೆ ಉತ್ತರ ಕೊರಿಯಾ ನಾಯಕನ ಹತ್ಯೆಗೆ ಟ್ರೈನಿಂಗ್‌ ಪಡೀತಿದೆ. ಈ ಟ್ರೈನಿಂಗ್‌ನ ಪ್ರಮುಖ ಟಾರ್ಗೆಟ್‌ ನಾರ್ತ್‌ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಉನ್‌. ಇದ್ರಲ್ಲಿ ಮುಖ್ಯವಾಗಿ ಏರಿಯಲ್‌ ಮ್ಯಾನುವರ್ಸ್‌ ಅಂದ್ರೆ ವೈಮಾನಿಕ ಕಾರ್ಯಾಚರಣೆ, ಪ್ರಮುಖ ಟಾರ್ಗೆಟ್‌ಗಳ ಮೇಲೆ ದಾಳಿ ಮಾಡೋದು ಮತ್ತು ದಾಳಿ ನಂತರ ಮಾಪ್‌ ಅಪ್‌ ಮಾಡೋ ಆಪರೇಷನ್‌ಗಳನ್ನ ನಡೆಸ್ತಿದ್ದೀವಿ. ಅಮೆರಿಕ ಕೂಡ ಇದ್ರಲ್ಲಿ ಭಾಗಿಯಾಗಿದೆʼ ಅಂತ ಹೇಳಿದ್ದಾರೆ. ಇನ್ನು ಅಮೆರಿಕದ ವಿಶೇಷ ಪಡೆಗಳ ಜೊತೆಗೆ ಸೇರ್ಕೊಂಡು ಈ ಟ್ರೈನಿಂಗ್‌ನ್ನ ಡಿಸೆಂಬರ್‌ನ ಪ್ರಾರಂಭದಲ್ಲೇ ಆಯೋಜಿಸಲಾಗಿತ್ತು ಅಂತ ದಕ್ಷಿಣ ಕೊರಿಯಾ ಸೇನೆಯ ಜಂಟಿ ಮುಖ್ಯಸ್ಥರು ಕನ್ಫರ್ಮ್‌ ಮಾಡಿದ್ದಾರೆ. ಈ ವಿಶೇಷ ಆರ್ಮಿ ಯೂನಿಟ್‌ನಲ್ಲಿ ಉತ್ತರ ಕೊರಿಯಾವನ್ನ ಹೊಕ್ಕು ಹತ್ಯೆಯನ್ನ ನಡೆಸೋಕೆ ಸುಲಭವಾಗುವಂತಹ ಹೆಲಿಕಾಪ್ಟರ್‌ ಮತ್ತು ವಿಮಾನಗಳು ಇವೆ ಎನ್ನಲಾಗ್ತಿದೆ.

ಅತ್ತ ಕಿಮ್‌ ಹತ್ಯೆ ಮಾಡೋ ಬಗ್ಗೆ ದಕ್ಷಿಣ ಕೊರಿಯಾ ಸ್ಕೆಚ್‌ ಹಾಕ್ತಿದ್ರೆ, ಇತ್ತ ಯುದ್ಧ ಸನ್ನಿಹಿತವಾಗಿದೆ ಅಂತ ಕಿಮ್ಮಣ್ಣ ಪುನರುಚ್ಚಾರ ಮಾಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಕಿಮ್‌ ಮೂರನೇ ಬಾರಿಗೆ ಈ ರೀತಿ ಹೇಳ್ತಾ ಇರೋದು. ವಾರಗಳ ಕಾಲ ಉತ್ತರ ಕೊರಿಯಾದ ಎಕಾನಮಿ, ಮಿಲಿಟರಿ ವಿದೇಶಾಂಗ ವಿಚಾರಗಳಿಗೆ ಸಂಬಂಧಿಸಿದಂತೆ ಕಿಮ್‌ ಸರ್ಕಾರ ಮಹತ್ವದ ಸಭೆಗಳನ್ನ ನಡೆಸಿದೆ. ಕೊನೆಗೆ ಇವತ್ತು ಹಿರಿಯ ಸೇನಾಧಿಕಾರಿಗಳ ಮೀಟಿಂಗ್‌ನಲ್ಲಿ ಮಾತಾಡ್ತಾ, ನಮ್ಮ ಮೇಲೆ ಆಕ್ರಮಣ ಮಾಡೋಕೆ ಹೊಂಚು ಹಾಕ್ತಿರೋ ಶತ್ರುಗಳು ಕೇರ್‌ಲೆಸ್‌ ನಡೆಗಳಿಂದ ಕೋರಿಯನ್‌ ಪೆನಿನ್ಸುಲಾದಲ್ಲಿ ಯಾವುದೇ ಕ್ಷಣದಲ್ಲಿ ಯುದ್ಧ ಶುರುವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಅಂತ ಹೇಳಿದ್ದಾರೆ. ಅಲ್ಲದೇ ಶತ್ರುಗಳು ಪ್ರಚೋದಿಸಿದ್ರೆ ಯಾವುದೇ ಮುಲಾಜು ನೋಡ್ಬೇಡಿ. ದಾಳಿಗೆ ತಕ್ಕ ಪ್ರತಿಕ್ರಿಯೆ ಕೊಡೋಕೆ ರೆಡಿಯಾಗಿ. ಬೇಕಿದ್ರೆ ಅಣ್ವಸ್ತ್ರಗಳನ್ನ ಬಳಸಿ ನಾಶ ಮಾಡಿ ಅಂತ ಉತ್ತರ ಕೊರಿಯಾ ಸೇನೆಗೆ ಆದೇಶಿಸಿದ್ದಾರೆ.ಜೊತೆಗೆ ಹೊಸ ವರ್ಷದ ಪ್ರಯುಕ್ತ ಸಭೆ ನಡೆಸಿರೋ ಕಿಮ್‌, 2024ರಲ್ಲಿ 3 ಹೊಸ ಸ್ಪೈ ಸೆಟಲೈಟ್‌ ಲಾಂಚ್‌ ಮಾಡಿ, ಸೇನಾ ಡ್ರೋನ್‌ಗಳನ್ನ ಬಿಲ್ಡ್‌ ಮಾಡೋ ಬಗ್ಗೆ ಶಪಥ ಮಾಡಿದ್ದಾರೆ. ಇದ್ರಲ್ಲಿ ಪರಮಾಣು ಶಸ್ತ್ರಗಾರವನ್ನ ಬೂಸ್ಟ್‌ ಮಾಡೋ ಬಗ್ಗೆ ಕೂಡ ಗೋಲ್‌ ಸೆಟ್‌ ಮಾಡ್ಕೊಂಡಿರೋದಾಗಿ ಹೇಳ್ಕೊಂಡಿದ್ದಾರೆ. ಅದ್ರಲ್ಲೂ ಈ ವರ್ಷ ಅಮೆರಿಕದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಕೊರಿಯನ್‌ ಪರ್ಯಾಯ ದ್ವೀಪದಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ.

ಅಂದ್ಹಾಗೆ ದಕ್ಷಿಣ ಕೊರಿಯಾ ಈ ರೀತಿ ಉತ್ತರ ಕೊರಿಯಾದ ನಾಯಕರನ್ನ ಹತ್ಯೆ ಮಾಡ್ತೀವಿ ಅಂತ ಹೇಳ್ತಿರೋದು ಇದೇ ಮೊದಲೇನಲ್ಲ. 2017ರಲ್ಲಿ ಕೂಡ ಅಂದಿನ ದಕ್ಷಿಣ ಕೊರಿಯಾದ ರಕ್ಷಣಾ ಸಚಿವ ಸಾಂಗ್‌ ಯಂಗ್‌-ಮೂ ಅವ್ರು ಕೂಡ ಈ ರೀತಿ ಓಪನ್‌ ಆಗಿ ಮಾತಾಡಿದ್ರು. ಅದ್ರಲ್ಲೂ ಉತ್ತರ ಕೊರಿಯಾ ಬಳಿ ಅಣ್ವಸ್ತ್ರಗಳು ಇವೆ, ದಕ್ಷಿಣ ಕೊರಿಯಾ ಬಳಿ ಇಲ್ಲ. ಹೀಗಾಗಿ ಅಟ್ಲೀಸ್ಟ್‌ ಕಿಮ್‌ಗೆ ಪ್ರಾಣಭಯ ಒಡ್ಡಿದ್ರೆ ಸ್ವಲ್ಪನಾದ್ರು ತಗ್ಗಬಹುದು ತಮ್ಮ ಅಗ್ರೆಸ್ಸಿವ್‌ ಬಿಹೇವಿಯರ್‌ನ ಕಡಿಮೆ ಮಾಡ್ಕೋಬಹುದು ಅನ್ನೋದು ದಕ್ಷಿಣ ಕೊರಿಯಾ ಲೆಕ್ಕಾಚಾರ. ಹೀಗಾಗಿ ಈ ದೃಷ್ಟಿಯಲ್ಲಿ ಕೂಡ ದಕ್ಷಿಣ ಕೊರಿಯಾ ರಕ್ಷಣಾ ಸಚಿವ ಈ ರೀತಿ ಹೇಳಿಕೆ ನೀಡಿರ್ಬಹುದು.

-masthmagaa.com

Contact Us for Advertisement

Leave a Reply