ಡಾಲರ್‌ ರೀತಿ ಭಾರತೀಯ ರೂಪಾಯಿಯನ್ನ ಬಳಸೋಕೆ ಶ್ರೀಲಂಕಾ ರೆಡಿ: ಅಧ್ಯಕ್ಷ ವಿಕ್ರಮಸಿಂಘೆ

masthmagaa.com:

ಡಾಲರ್‌ನ ರೀತಿಯಲ್ಲಿ ಭಾರತದ ರೂಪಾಯಿಯನ್ನ ಸಾಮಾನ್ಯ ಕರೆನ್ಸಿಯಾಗಿ ಬಳಸೋಕೆ ಶ್ರೀಲಂಕ ಎದುರು ನೋಡ್ತಿದೆ ಅಂತ ಶ್ರೀಲಂಕ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಅವ್ರು ಹೇಳಿದ್ದಾರೆ. ಇಂಡಿಯನ್‌ ಸಿಇಒ ಫೋರಮ್‌ನಲ್ಲಿ ಮಾತಾಡಿರುವ ರಾನಿಲ್‌ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಜಪಾನ್‌, ದಕ್ಷಿಣ ಕೊರಿಯಾ ಹಾಗೂ ಚೀನಾ ಸೇರಿದಂತೆ ಪೂರ್ವ ಏಷ್ಯಾದ ರಾಷ್ಟ್ರಗಳು 75 ವರ್ಷಗಳ ಹಿಂದೆ ಬೆಳವಣಿಗೆ ಕಂಡಿವೆ. ಅದೇ ರೀತಿ ಈಗ ಹಿಂದೂ ಮಹಾಸಾಗರ ಭಾಗದಲ್ಲಿ ಭಾರತ ಬೆಳವಣಿಗೆಯಾಗಲಿದೆ. ಇದೇ ವೇಳೆ ಭಾರತದ ರೂಪಾಯಿ ಏನಾದ್ರೂ ಕಾಮನ್‌ ಕರೆನ್ಸಿಯಾದ್ರೆ ನಮಗೆ ಯಾವುದೇ ರೀತಿಯ ವ್ಯಾತ್ಯಾಸ ಆಗೋದಿಲ್ಲ. ಅಷ್ಟೆ ಅಲ್ದೆ ಜಗತ್ತು ಬೆಳೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಕೂಡ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿದೆ ಅಂತ ರಾನಿಲ್‌ ವಿಕ್ರಮಸಿಂಘೆ ಅಭಿಪ್ರಾಯ ಪಟ್ಟಿದ್ದಾರೆ. ಅಂದ್ಹಾಗೆ ಮುಂದಿನ ವಾರ ರಾನಿಲ್‌ ಅವ್ರು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.

-masthmagaa.com

Contact Us for Advertisement

Leave a Reply