ಭಾರತದ ಬಳಿ 50 ಕೋಟಿ ಡಾಲರ್ ಸಾಲ ಕೇಳಿದ ಶ್ರೀಲಂಕಾ!

masthmagaa.com:

ವಿದೇಶಿ ವಿನಿಮಯ ಬಿಕ್ಕಟ್ಟಿಗೆ ಸಿಲುಕಿರೋ ದ್ವೀಪರಾಷ್ಟ್ರ ಶ್ರೀಲಂಕಾ ಭಾರತದ ಬಳಿ 50 ಕೋಟಿ ಡಾಲರ್ ಅಂದ್ರೆ 3,700 ಕೋಟಿ ರೂಪಾಯಿ ಸಾಲ ಕೇಳಿದೆ. ಶ್ರೀಲಂಕಾದಲ್ಲಿನ ಇಂಧನ ದ ಸ್ಟಾಕ್ ಜನವರಿಗೆವರೆಗೆ ಮಾತ್ರವೇ ಸಾಕಾಗಲಿದೆ ಅಂತ ಇತ್ತೀಚೆಗಷ್ಟೇ ಇಂಧನ ಸಚಿವ ಉದಯ ಗಮ್ಮನಪಿಲ ಎಚ್ಚರಿಸಿದ್ರು. ಸರ್ಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷಱನ್​​​​ ದೇಶದ ಎರಡು ಪ್ರಮುಖ ರಾಷ್ಟ್ರೀಯ ಬ್ಯಾಂಕ್​​ಗಳಾದ ಬ್ಯಾಂಕ್ ಆಫ್ ಸಿಲೋನ್ ಮತ್ತು ಪೀಪಲ್ಸ್ ಬ್ಯಾಂಕ್​​ನಲ್ಲಿ 3.3 ಬಿಲಿಯನ್ ಡಾಲರ್ ಅಂದ್ರೆ 24,761 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ತೈಲ ಖರೀದಿಗೆ ಭಾರತದ ಬಳಿ ಸಾಲ ಕೇಳಿದೆ ಶ್ರೀಲಂಕಾ.

-masthmagaa.com

Contact Us for Advertisement

Leave a Reply