ವಿಧಾನಸೌಧಕ್ಕೆ 3 ಹಂತದ ಭದ್ರತೆ: ಹೈ ಟೈಕ್ನಾಲಜಿ ಆಧರಿತ ಟೈಟ್ ಬಂದೋಬಸ್ತ್

masthmagaa.com:

ಇತ್ತೀಚೆಗೆ ವಿಧಾನಸೌಧದಲ್ಲಿ ಸಂಭವಿಸಿದ್ದ ಭದ್ರತಾ ಲೋಪ ಭಾರಿ ಚರ್ಚೆಗೆ ಕಾರಣವಾಗಿತ್ತು. ಅನಾಮಧೇಯ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಕಲಾಪದ ನಡುವೆ ಕಾಣಿಸಿಕೊಂಡಿದ್ದು, ಭದ್ರತಾ ಲೋಪವನ್ನ ಎತ್ತಿ ಹಿಡಿದಿತ್ತು. ಇದರ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದ್ದು, ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಭಾರಿ ಭದ್ರತೆ ಕೈಗೊಳ್ಳಲು ಮುಂದಾಗಿದೆ. ಹೈ ಟೈಕ್ನಾಲಜಿ ಆಧರಿತ ಟೈಟ್ ಬಂದೋಬಸ್ತ್ ಮಾಡಲು ಮುಂದಾಗಿದ್ದು, 3 ಹಂತಗಳ ಭದ್ರತಾ ಸಿದ್ಧತೆಗಳನ್ನ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ವಿಧಾನಸೌಧಕ್ಕೆ ಬರೋರಿಗೆ ಲೇಸರ್‌ ಐಡೆಂಟಿಟಿ ಸೆನ್ಸಿಟಿವ್‌ ಐಡಿ ಕಾರ್ಡ್ ನೀಡಲಾಗುತ್ತೆ. ಈ ಮೂಲಕ ಅನುಮತಿ ಇದ್ದವರಿಗೆ ಐಡಿ ಪರಿಶೀಲಿಸಿ ಒಳಗೆ ಬಿಡಲಾಗುತ್ತೆ. ಬಳಿಕ ಸಿಸಿಟಿವಿ ಕ್ಯಾಮರಾ, ಕಂಟ್ರೋಲ್ ರೂಂ, ಸ್ಕ್ಯಾನರ್​ಗಳಿಂದ ನಿಗಾ ವಹಿಸಲಿದ್ದು, ಒಳಗೆ ಪ್ರವೇಶಿಸಲು ವಿಸಿಟರ್​ಗಳಿಗೆ ಸ್ಮಾರ್ಟ್ ಪಾಸ್ ಕಡ್ಡಾಯವಾಗಿ ಇರಬೇಕಾಗಿದೆ. ಅಂತಿಮವಾಗಿ ಪಾರ್ಲಿಮೆಂಟ್​ನಲ್ಲಿರುವ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ ಅತ್ಯಾಧುನಿಕ ತಂತ್ರಜ್ಞಾನವನ್ನು ಸಹ ಬಳಕೆಗೆ ಸರ್ಕಾರ ಪ್ಲ್ಯಾನ್ ಮಾಡಿದೆ.

-masthmagaa.com

Contact Us for Advertisement

Leave a Reply