ಭಾರಿ ಪ್ರಮಾಣದ ಬೆಂಗಳೂರು ಟ್ರಾಫಿಕ್‌ನಲ್ಲೇ ಆಯಿತು ಪಿಜ್ಜಾ ಆರ್ಡರ್‌ ಅಂಡ್‌ ಡೆಲಿವರಿ!

masthmagaa.com:

ರಾಜಧಾನಿ ಬೆಂಗಳೂರಿನ ಟ್ರಾಫಿಕ್‌ ಅದೆಷ್ಟು ಫೇಮಸ್‌ ಅಂತ ಎಲ್ಲರಿಗೂ ಗೊತ್ತಿದೆ. ಆದ್ರೆ ನಿನ್ನೆ ಸಂಜೆ ಔಟರ್‌ ರಿಂಗ್‌ ರೋಡ್‌ (ORR)ನಲ್ಲಿ ಉಂಟಾದ ಟ್ರಾಫಿಕ್‌ ಜಾಮ್‌ ವಿಶ್ವದಾದ್ಯಂತ ಸುದ್ದಿ ಮಾಡಿದೆ. ಏನಿಲ್ಲ ಅಂದ್ರೂ ಸುಮಾರು 5 ಗಂಟೆಗಳ ಕಾಲ ಜನ ಟ್ರಾಫಿಕ್‌ನಲ್ಲಿಯೇ ಕಳೆದಿದ್ದಾರೆ. ರಾತ್ರಿ 12:30 ಆದ್ರು ಟ್ರಾಫಿಕ್‌ ಕರಗಿಲ್ಲ… ಕೇವಲ 5 ಕಿ.ಮೀ ಮುಂದೆ ಹೋಗೋಕೆ 2 ಗಂಟೆ ತಗುಲಿದೆ. ಎಷ್ಟೋ ಜನ 10-10 ಕಿ.ಮೀ ನಡ್ಕೊಂಡು ಮನೆ ತಲುಪಿದ್ದಾರೆ. ವಾಹನ ಸವಾರರೊಬ್ಬರು ಪಿಜ್ಜಾ ಆರ್ಡರ್‌ ಮಾಡಿದ್ದು, ಪಿಜ್ಜಾದ ಡೆಲಿವರಿ ಎಕ್ಸಿಕ್ಯೂಟಿವ್‌ಗಳು ಪ್ರಯಾಣಿಕರಿಗೆ ಪಿಜ್ಜಾ ಡೆಲಿವರಿ ಮಾಡ್ತಿರೋ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಹೆವಿ ಟ್ರಾಫಿಕ್‌ನ ನಡುವೆಯೂ ಲೈವ್‌ ಲೊಕೇಶನ್‌ ಟ್ರ್ಯಾಕ್‌ ಮಾಡ್ಕೊಂಡು ಬಂದಿರುವ ಡೆಲಿವರಿ ಏಜೆಂಟ್‌ಗಳು ಸರಿಯಾದ ಸಮಯಕ್ಕೆ ಪಿಜ್ಜಾಗಳನ್ನ ತಲುಪಿಸಿದ್ದಾರೆ. ಟ್ರಾಫಿಕ್‌ ಜಾಮ್‌ನ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿವೆ. ಅಂದ್ಹಾಗೆ ಈ ಪರಿಪ್ರಮಾಣದಲ್ಲಿ ಟ್ರಾಫಿಕ್‌ ಉಂಟಾಗೋಕೆ ಕಾರಣ ಸಾಲು ಸಾಲು ರಜೆಗಳು…. ಇವತ್ತು ಈದ್‌ ಮಿಲಾದ್‌, ನಾಳೆ ಕರ್ನಾಟಕ ಬಂದ್‌, ಬಳಿಕ ಶನಿವಾರ, ಭಾನುವಾರ ಹೇಗೂ ರಜೆ ಇರುತ್ತೆ, ಕೊನೆಗೆ ಸೋಮವಾರ ಗಾಂಧಿ ಜಯಂತಿ ಇದೆ. ಸೊ ಈ ರೀತಿ ಸತತ 5 ದಿನ ರಜೆ ಇದ್ದಿದ್ರಿಂದ ಟೆಕ್ಕಿಗಳು, ಖಾಸಗಿ ಉದ್ಯೋಗಿಗಳು ಸಾಮೂಹಿಕವಾಗಿ ಬೆಂಗಳೂರಿನಿಂದ ಗುಳೆ ಎದ್ದಿದ್ದಾರೆ. ಇದ್ರ ಜೊತೆಗೆ ಮಳೆ ಇದ್ದಿದ್ರಿಂದ ಅಲ್ಲಲ್ಲಿ ನೀರು ತುಂಬಿದೆ, 3:30ರಿಂದ 5 ಗಂಟೆವರೆಗೆ ಹಲವಾರು ಕಡೆ ವಾಹನಗಳು ಕೆಟ್ಟು ನಿಂತಿವೆ. ಇದ್ರ ಪರಿಣಾಮ ಪ್ರತಿಷ್ಠಿತ ಟೆಕ್‌ಪಾರ್ಕ್‌ಗಳನ್ನ, ಸುಮಾರು 10 ಲಕ್ಷ ಐಟಿ ಉದ್ಯೋಗಿಗಳನ್ನ ಹೊಂದಿರುವ ORR ರೋಡ್‌ ಜಾಮ್‌ ಆಗಿದೆ. ಬೆಂಗಳೂರು ಟ್ರಾಫಿಕ್‌ ಪೋಲಿಸರ ಪ್ರಕಾರ ಸಾಮಾನ್ಯವಾಗಿ ಬುಧವಾರ ORR ರಸ್ತೆಯಲ್ಲಿ 1.5ರಿಂದ 2 ಲಕ್ಷ ವಾಹನಗಳು ಓಡಾಡುತ್ವೆ. ಆದ್ರೆ ನೆನ್ನೆ 7:30ರ ಸುಮಾರು ಬರೋಬ್ಬರಿ 3.5 ಲಕ್ಷ ವಾಹನಗಳು ಬಂದಿವೆ. ಹೀಗಾಗಿ ಜಾಮ್‌ ಆಗಿದೆ.

-masthmagaa.com

Contact Us for Advertisement

Leave a Reply