ಸಂಘರ್ಷ ಪೀಡಿತ ಸುಡಾನ್‌ನಲ್ಲಿ ಮತ್ತೆ ಕದನ ವಿರಾಮ ಘೋಷಣೆ!

masthmagaa.com:

ಸುಡಾನ್‌ ಅಧಿಕಾರಕ್ಕಾಗಿ ಕಿತ್ತಾಡ್ತಿರೋ ಅಲ್ಲಿನ ಸೇನೆ ಹಾಗೂ ಅರೆಸೇನಾ ಪಡೆ ಮತ್ತೆ 24 ಗಂಟೆಗಳ ಕದನ ವಿರಾಮ ಜಾರಿಗೆ ಒಪ್ಪಿಕೊಂಡಿವೆ ಅಂತ ಮದ್ಯಸ್ಥಿಕೆ ವಹಿಸಿರೊ ಸೌದಿ ಅರೇಬಿಯಾ ಹಾಗೂ ಅಮೆರಿಕ ತಿಳಿಸಿವೆ. ಜೂನ್‌ 10ರ ಬೆಳಗ್ಗೆ 6 ಗಂಟೆಯಿಂದ ಮುಂದಿನ 24 ಗಂಟೆ ಅವಧಿಯಲ್ಲಿ ಸುಡಾನ್‌ನಲ್ಲಿ ಕದನ ವಿರಾಮ ಜಾರಿಯಲ್ಲಿರುತ್ತೆ. ಈ ವೇಳೆ ಯಾವುದೇ ರೀತಿಯ ದಾಳಿಗಳನ್ನ ಮಾಡದಂತೆ ಉಭಯ ಸೇನೆಗಳು ಒಪ್ಪಿಕೊಂಡಿವೆ. ಒಂದು ವೇಳೆ ಕದನ ವಿರಾಮ ಉಲ್ಲಂಘನೆ ಆದ್ರೆ ಈ ಮಾತುಕತೆಯಿಂದ ದೂರ ಉಳಿಯೋದಾಗಿ ಸೌದಿ ಹೇಳಿದೆ. ಇತ್ತ ಕದನ ವಿರಾಮ ಉಲ್ಲಂಘನೆಯಾದ್ರೆ ತೀವ್ರ ಕ್ರಮ ಕೈಗೊಳ್ಳಲಾಗುತ್ತೆ ಅಂತ ಅಮೆರಿಕ ಎಚ್ಚರಿಕೆ ನೀಡಿದೆ. ಜೊತೆಗೆ ಸುಡಾನ್‌ನಲ್ಲಿ ಹಿಂಸಾಚಾರ ಮುಂದುವರೆದ್ರೆ ಪ್ರಮುಖ ರಕ್ಷಣಾ ಕಂಪನಿಗಳ ವಿರುದ್ಧ ನಿರ್ಬಂಧ ಹೇರಬೇಕಾಗುತ್ತೆ ಅಂತ ವೈಟ್‌ಹೌಸ್‌ ಎಚ್ಚರಿಸಿದೆ.

-masthmagaa.com

Contact Us for Advertisement

Leave a Reply