ಚುನಾವಣಾ ಬಾಂಡ್‌ಗೆ ಡೆಡ್‌ಲೈನ್‌ ಫಿಕ್ಸ್‌! SBIಗೆ ಸುಪ್ರೀಂ ಶಾಕ್‌!

masthmagaa.com:

ಚುನಾವಣಾ ಬಾಂಡ್‌ ಖರೀದಿಸಸಿದವ್ರ ಮಾಹಿತಿ ಬಹಿರಂಗ ಮಾಡೋದ್ರಲ್ಲಿ ಮೀನಾಮೇಷ ಎಣಿಸ್ತಿದ್ದ SBIಗೆ ಸುಪ್ರೀಂ ಕೋರ್ಟ್‌ ಇವತ್ತು ಬೀಸಿದೆ. ಮಾಹಿತಿಯನ್ನ ಬಹಿರಂಗ ಪಡಿಸೋಕೆ ಇನ್ನಷ್ಟು ಸಮಯ ಬೇಕು ಅಂತ SBI ಸಲ್ಲಿಸಿದ ಅರ್ಜಿಯನ್ನ ಚಾಟಿ ವಜಾಗೊಳಿಸಿದೆ. ʻಕಳೆದ 26 ದಿನಗಳಿಂದ ಏನ್‌ ಮಾಡಿದ್ರಿ…ಯಾವ ಕ್ರಮ ತಗೊಂಡ್ರಿ? ಈ ಬಗ್ಗೆ ನಿಮ್ಮ ಅರ್ಜಿ ಸೈಲೆಂಟ್‌ ಆಗಿದೆʼ ಅಂತ ಕಿಡಿಕಾರಿದೆ. ಮಾರ್ಚ್‌ 12ರಂದು ಅಂದ್ರೆ ನಾಳೆ ಸಂಜೆ ಕೆಲಸದ ಅವಧಿ ಮುಗಿಯೋ ಒಳಗೆ ಬಹಿರಂಗ ಪಡಿಸೋಕೆ ಆದೇಶಿಸಿ ಶಾಕ್‌ ನೀಡಿದೆ. ಜೊತೆಗೆ ಈ ಮಾಹಿತಿಯನ್ನ ಪಡೆದ ಚುನಾವಣಾ ಆಯೋಗ ತನ್ನ ಅಫಿಶಿಯಲ್‌ ವೆಬ್‌ಸೈಟ್‌ನಲ್ಲಿ ಮಾರ್ಚ್‌ 15ರ ಸಂಜೆ 5 ಗಂಟೆ ಒಳಗಾಗಿ ಪಬ್ಲಿಶ್‌ ಮಾಡೋಕೂ ಆದೇಶ ನೀಡಿದೆ. ಮುಖ್ಯನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್‌ ನೇತೃತ್ವದ 5 ಸದಸ್ಯರ ಸಂವಿಧಾನ ಪೀಠ ಆದೇಶ ಹೊರಡಿಸಿದೆ. ಅಲ್ದೇ ʻಸೀಲ್ಡ್‌ ಕವರ್‌ನ್ನ ತೆರೆದು, ಮಾಹಿತಿಗಳನ್ನ ಒಟ್ಟು ಸೇರಿಸಿ… ಅದನ್ನ ಚುನಾವಣಾ ಆಯೋಗಕ್ಕೆ ಕೊಟ್ಬಿಡಿ. ದಾನಿಗಳ ವಿವರಗಳು ಮತ್ತು ರಾಜಕೀಯ ಪಕ್ಷಗಳು ಎನ್‌ಕ್ಯಾಶ್‌ ಮಾಡಿರೋ ಡಿಟೇಲ್ಸ್‌ ಕೊಟ್ರೆ ಸಾಕು…ಯಾವ್ದೇ ರೀತಿ ಮ್ಯಾಚ್‌ ಮಾಡೋ ಅಗತ್ಯ ಇಲ್ಲʼ ಅಂತ SBIಗೆ ಸಲಹೆಯನ್ನೂ ನೀಡಿದೆ.

-masthmagaa.com

Contact Us for Advertisement

Leave a Reply