ತನ್ನ ವಾಯುಪ್ರದೇಶದಲ್ಲಿ ಚೀನಾ ಯುದ್ದವಿಮಾನ ಹಾರಾಟ: ತಿರುಗೇಟು ಕೊಟ್ಟ ತೈವಾನ್‌!

masthmagaa.com:

ತಮ್ಮ ವಾಯುಪ್ರದೇಶದ ಮೇಲೆ ಚೀನಾದ ಯುದ್ದ ವಿಮಾನಗಳು ಮತ್ತೊಮ್ಮೆ ಹಾರಾಟ ನಡೆಸಿವೆ ಅಂತ ತೈವಾನ್‌ ಹೇಳಿದೆ. ಚೀನಾ ಒಟ್ಟು 29 ಯುದ್ದ ವಿಮಾನಗಳನ್ನ ಹಾರಾಟ ಮಾಡಿಸಿದೆ. ಇದರಲ್ಲಿ 17 ಫೈಟರ್‌ ಜೆಟ್‌ಗಳು 6 ಬಾಂಬರ್‌ಗಳು ಕೂಡ ಇದ್ವು ಅಂತ ಹೇಳಿದೆ. ಇದರ ಬೆನ್ನಲ್ಲೇ ನಾವು ಕೂಡ ನಮ್ಮ ವಿಮಾನಗಳನ್ನ ಕಳುಹಿಸಿಕೊಟ್ಟು ತಿರುಗೇಟು ನೀಡಿದ್ದೀವಿ. ಅವರ ಚಲನವಲನಗಳನ್ನ ಮಾನಿಟರ್‌ ಮಾಡೋಕೆ ಏರ್‌ಡಿಫೆನ್ಸ್‌ ಸಿಸ್ಟಂ ಕೂಡ ನಿಯೋಜನೆ ಮಾಡಿದ್ದೀವಿ ಅಂತ ತೈವಾನ್‌ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.

-masthmagaa.com

Contact Us for Advertisement

Leave a Reply