ಚೀನಾದಲ್ಲಿರುವ ತನ್ನ ಪ್ರಜೆಗಳಿಗೆ ಎಚ್ಚರಿಕೆ ಸಂದೇಶ ಕೊಟ್ಟ ಜಪಾನ್‌! ಯಾಕೆ?

masthmagaa.com:

ಜಪಾನ್‌ ತನ್ನ ಫುಕುಶಿಮಾ ಅಣುಸ್ಥಾವರದ ವೇಸ್ಟ್‌ ವಾಟರ್‌ನ್ನ ಪೆಸಿಫಿಕ್‌ ಸಾಗರಕ್ಕೆ ರಿಲೀಸ್‌ ಮಾಡಿದೆ. ಇದನ್ನ ಖಂಡಿಸಿದ್ದ ಚೀನಾ, ಜಪಾನ್‌ನ ಈ ನಡೆ ಸ್ವಾರ್ಥದಿಂದ ಕೂಡಿದೆ ಅಂತ ಕಿಡಿಕಾರಿತ್ತು. ಈ ಹಿನ್ನಲೆಯಲ್ಲಿ ಚೀನಾದಲ್ಲಿರುವ ಜಪಾನ್‌ ಪ್ರಜೆಗಳು ಹುಷಾರಾಗಿ ಇರುವಂತೆ ಜಪಾನ್‌ ಸೂಚನೆ ನೀಡಿದೆ. ಹೊರಗಡೆ ಹೋಗುವಾಗ ಜಾಗರೂಕರಾಗಿರಿ ಹಾಗೂ ಅನಾವಶ್ಯಕವಾಗಿ ಜೋರಾಗಿ ಮಾತಾಡುವುದನ್ನ ತಪ್ಪಿಸಿ ಅಂತ ಚೀನಾದಲ್ಲಿರುವ ಜಪಾನ್‌ ರಾಯಭಾರ ಕಚೇರಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಜೊತೆಗೆ ರಾಯಭಾರ ಕಚೇರಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚು ಗಮನ ಕೊಡಿ ಅಂತ ಹೇಳಿದೆ. ಅಂದ್ಹಾಗೆ ಜಪಾನ್‌ ವೇಸ್ಟ್‌ ವಾಟರ್‌ ರಿಲೀಸ್‌ ಮಾಡಿರೋದನ್ನ ವಿರೋಧಿಸಿ ಹಾಂಗ್‌ಕಾಂಗ್‌ನಲ್ಲಿ ಹಲವರು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಜಪಾನ್‌ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ.

-masthmagaa.com

Contact Us for Advertisement

Leave a Reply