ಭೂಮಿಯನ್ನೇ ಹೋಲುವ ಮತ್ತೊಂದು ಗ್ರಪ ಪತ್ತೆ?

masthmagaa.com:

ಭೂಮಿಯ ರೀತಿಯಲ್ಲೇ ವಾಸಯೋಗ್ಯ ಮತ್ತೊಂದು ಗ್ರಹ ಇರ್ಬೋದ ಅನ್ನೊ ವಿಜ್ಞಾನಿಗಳ ಹಡುಕಾಟ ಮುಂದುವರೆದಿದೆ. ಇದೀಗ ಭೂಮಿಯಿಂದ 120 ಜ್ಯೋತಿರ್‌ವರ್ಷಗಳಷ್ಟು ದೂರವಿರುವ ಗ್ರಹದಲ್ಲಿ ನೀರಿರುವ ಬಗ್ಗೆ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾದ ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ನ ಹೊಸ ಅನ್ವೇಷಣೆಯ ಪ್ರಕಾರ, K2-18 b ಅನ್ನೊ ಭೂಮಿಗಿಂತ 8.6 ಪಟ್ಟು ದೊಡ್ಡ ಎಕ್ಸೋಪ್ಲಾನೆಟ್‌ನಲ್ಲಿ ವಾಸಯೋಗ್ಯ ವಾತಾವರಣ ಇದೆ ಎನ್ನಲಾಗಿದೆ. ಜೊತೆಗೆ ಈ ಎಕ್ಸೋಪ್ಲಾನೆಟ್‌ನಲ್ಲಿ ಮೀಥೇನ್‌, ಕಾರ್ಬನ್‌ ಡೈ ಅಕ್ಸೈಡ್‌ ಸೇರಿದಂತೆ ಕಾರ್ಬನ್‌ ಯುಕ್ತ ವಸ್ತುಗಳಿವೆ ಅಂತ ಗೊತ್ತಾಗಿದೆ. ಅಲ್ದೆ ಇದ್ರಲ್ಲಿ ಮೀಥೇನ್‌ ಮತ್ತು ಕಾರ್ಬನ್‌ ಡೈಆಕ್ಸೈಡ್‌ ಇರೋದ್ರಿಂದ, ಹೈಡ್ರೋಜನ್‌ನ ಸಮೃದ್ಧ ವಾತಾವರಣ ಹಾಗೂ ಸಾಗರದಿಂದ ಆವೃತವಾಗಿರುವ ಸರ್ಫೇಸ್‌ ಇರುವ ಸಾಧ್ಯತೆ ಹೆಚ್ಚಿದೆ ಅಂತ ನಾಸಾ ಹೇಳಿದೆ.

-masthmagaa.com

Contact Us for Advertisement

Leave a Reply