ಎಲೆಕ್ಷನ್‌ ಅಡ್ಡಿಗೆ ಯತ್ನ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಸಹಾಯಕನ ಬಂಧನ!

masthmagaa.com:

ಲೋಕಸಭಾ ಚುನಾವಣೆಯಲ್ಲಿ ಅಶಾಂತಿ ಉಂಟು ಮಾಡಲು ಸಂಚು ರೂಪಿಸಿದ್ದ ಉಗ್ರರ ಸಹಾಯಕನೊಬ್ಬನನ್ನ ಬಂಧಿಸಿರೊ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ವೃತ್ತಿಯಿಂದ ಶಾಲೆಯ ಮುಖ್ಯೋಪಾಧ್ಯಾಯನಾಗಿದ್ದ ಶಂಕಿತನನ್ನ ಅಲ್ಲಿನ ಪೂಂಚ್‌ನಲ್ಲಿರೋ ಆತನ ಮನೆಯಲ್ಲೆ, ಜಮ್ಮು ಕಾಶ್ಮೀರ ಪೊಲೀಸ್‌ ಹಾಗೂ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಅರೆಸ್ಟ್‌ ಮಾಡಿದ್ದಾರೆ. ಶಂಕಿತನ ಬಳಿ ಇದ್ದ ಪಾಕಿಸ್ತಾನ ನಿರ್ಮಿತ ಪಿಸ್ತೂಲ್‌ ಸೇರಿದಂತೆ ಎರಡು ಚೈನೀಸ್‌ ಗ್ರನೇಡ್‌ಗಳನ್ನ ವಶಪಡಿಸಿಕೊಳ್ಳಲಾಗಿದೆ.

-masthmagaa.com

Contact Us for Advertisement

Leave a Reply