ಟೆಸ್ಲಾ ಷೇರುಗಳಲ್ಲಿ ಇಳಿಕೆ, ಕಳವಳಗೊಂಡ ಹೂಡಿಕೆದಾರರು! ಮಸ್ಕ್‌ಗೆ ಸಂಕಷ್ಟ!

masthmagaa.com:

ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ರ ಟೆಸ್ಲಾ ತನ್ನ ಷೇರುಗಳಲ್ಲಿ‌ ಭಾರಿ ಕುಸಿತ ಕಾಣ್ತಾ ಇದ್ದು, ಎರಡು ವರ್ಷಗಳಲ್ಲಿ ಅತಿ ಹೆಚ್ಚು ಕಡಿಮೆ ಮಟ್ಟವನ್ನ ತಲುಪಿವೆ. ಟ್ವಿಟರ್‌ ಖರೀದಿ ಮಾಡಿದ್ಮೇಲೆ ಟೆಸ್ಲಾಗೆ ಹೊಡೆತ ಬಿದ್ದಿದೆ ಅಂತ ಟೆಸ್ಲಾ ಹೂಡಿಕೆದಾರರು ಆರೋಪ ಮಾಡಿದ್ದಾರೆ. ಇನ್ನು ಹೆಚ್ಚುತ್ತಿರೋ ಸ್ಪರ್ಧೆಯಲ್ಲಿ ಜಗತ್ತಿನ ಟಾಪ್‌ ಎಲೆಕ್ಟ್ರಿಕ್‌ ಕಾರ್‌ ಬ್ರಾಂಡ್‌ ಟೆಸ್ಲಾದ ಮಾರಾಟಕ್ಕೆ ತೊಂದ್ರೆಯಾಗ್ಬೋದು ಅಂತ ಹೂಡಿಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತ ಪ್ರತಿಕ್ರಿಯೆ ನೀಡಿರೋ ಮಸ್ಕ್‌ ಟೆಸ್ಲಾ ಷೇರು ಹೊಂದಿರೋರಿಗೆ ಖಂಡಿತ ಟ್ವಿಟರ್‌ನಿಂದ ಲಾಭ ಸಿಗುತ್ತೆ ಅಂತ ಹೇಳಿದ್ದಾರೆ. ಅಂದ್ಹಾಗೆ ಟ್ವಿಟರ್‌ ಖರೀದಿಸಿದ ನಂತ್ರ ಹಲವು ತೊಂದ್ರೆಯಲ್ಲಿ ಸಿಲುಕಿರೋ ಮಸ್ಕ್‌ ಈಗ ಜಗತ್ತಿನ ನಂಬರ್‌ ಒನ್‌ ಶ್ರೀಮಂತ ಅನ್ನೋ ಪಟ್ಟವನ್ನು ಸಹ ಕಳೆದುಕೊಂಡಿದ್ದಾರೆ… ಇನ್ನು ಅತ್ತ ಮಸ್ಕ್‌ರ ಪ್ರೈವೇಟ್‌ ಜೆಟ್‌ ಅನ್ನ ಟ್ರ್ಯಾಕ್‌ ಮಾಡ್ತಿದ್ದ ಬೋಟ್‌ ಅಕೌಂಟ್‌ ಅಥ್ವಾ ಆಟೋಮ್ಯಾಟಿಕ್‌ ಅಕೌಂಟ್‌ನ್ನ ಟ್ವಿಟರ್‌ ತೆಗೆದು ಹಾಕಿದೆ. ಈ ವಿಚಾರವನ್ನ ಅಕೌಂಟ್‌ ಆಪರೇಟ್‌ ಮಾಡ್ತಿದ್ದ ಸ್ವೀನಿ ಅನ್ನೋ ವಿದ್ಯಾರ್ಥಿ ಹೇಳಿದ್ದಾರೆ. ನಂತ್ರ ಸ್ವೀನಿಯ ಟ್ವಿಟರ್‌ ಅಕೌಂಟನ್ನ ಸಹ ಕಂಪನಿ ತೆಗೆದು ಹಾಕಿದೆ. ಅಂದ್ಹಾಗೆ ಈ ಹಿಂದೆ ಮಸ್ಕ್‌, ನನ್ನ ಪ್ರೈವೇಟ್‌ ಪ್ಲೇನ್‌ ಅನ್ನ ಟ್ರ್ಯಾಕ್‌ ಮಾಡೋ ಅಕೌಂಟ್‌ಗಳನ್ನ ಬ್ಯಾನ್‌ ಮಾಡಲ್ಲ ಅಂತ ಹೇಳಿದ್ರು, ಆದ್ರೆ ಈಗ ಉಲ್ಟಾ ಹೊಡೆದಿದ್ದಾರೆ. ಫ್ಲೋರಿಡಾ ವಿವಿ ವಿದ್ಯಾರ್ಥಿಯಾಗಿರೋ ಸ್ವೀನಿ ಇದೇ ತರ ಮಸ್ಕ್‌ರ ಖಾಸಗಿ ವಿಮಾನವನ್ನ ಟ್ರ್ಯಾಕ್‌ ಮಾಡೋ ಬೋಟ್‌ಗಳನ್ನ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌ ಹಾಗೂ ಟೆಲಿಗ್ರಾಮ್‌ಗಳಲ್ಲಿ ಹೊಂದಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ 2021ರಲ್ಲಿ ಈ ಬೋಟ್‌ನ್ನ ನಿಲ್ಲಿಸುವಂತೆ 5 ಸಾವಿರ ಡಾಲರ್‌ ಅಂದ್ರೆ ಸುಮಾರು 4.1 ಲಕ್ಷ ರೂಪಾಯಿ ಹಣವನ್ನ ಮಸ್ಕ್‌ ಆಫರ್‌ ಮಾಡಿದ್ರು ಅಂತ ಸ್ವೀನಿ ಇಂಟರ್‌ವ್ಯೂ ಒಂದ್ರಲ್ಲಿ ಹೇಳಿಕೊಂಡಿದ್ರು. ಇನ್ನು ಇತರ ಬಿಲಿಯನೇರ್‌ಗಳಾದ ಮಾರ್ಕ್‌ ಜುಕರ್‌ಬರ್ಗ್, ಜೆಫ್‌ ಬೆಜೋಜ್‌ ಹಾಗೂ ಬಿಲ್‌ ಗೇಟ್ಸ್‌ ಅವರ ಜೆಟ್‌ಗಳನ್ನ ಟ್ರ್ಯಾಕ್‌ ಮಾಡ್ತಿದ್ದ ಅಕೌಂಟ್‌ಗಳನ್ನ ಸಹ ಸಸ್ಪೆಂಡ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply