ಪಾಕ್‌ಗೆ ನೀರು ಬಂದ್‌! ರಾವಿ ನದಿಗೆ ಅಣೆಕಟ್ಟು ಕಟ್ಟಿದ ಭಾರತ!

masthmagaa.com:

ರಾವಿ ನದಿ ನೀರನ್ನ ಪಾಕಿಸ್ತಾನಕ್ಕೆ ಹರಿಸೋದನ್ನ ಭಾರತ ಕಂಪ್ಲೀಟ್‌ ಆಗಿ ನಿಲ್ಲಿಸಿದೆ. ಪಂಜಾಬ್‌ ಮತ್ತು ಜಮ್ಮು ಕಾಶೀರದಲ್ಲಿ ಶಾಪುರ್‌ ಕಂಡಿ ಅಣೆಕಟ್ಟನ್ನ ನಿರ್ಮಿಸೋಕೆ ಭಾರತ ಈ ಕ್ರಮ ತಗೊಂಡಿದೆ ಅಂತ ಮಾಧ್ಯಮಗಳೂ ವರದಿ ಮಾಡಿವೆ. ಇದರಿಂದ ಜಮ್ಮು & ಕಾಶ್ಮೀರದ ಪ್ರದೇಶಕ್ಕೆ ಹೆಚ್ಚುವರಿಯಾಗಿ 1150 ಕ್ಯೂಸೆಕ್‌ ನೀರು ಸಿಗಲಿದೆ ಅಂತ ಹೇಳಲಾಗ್ತಿದೆ. ಈ ಹಿಂದೆ ಇಷ್ಟು ಪ್ರಮಾಣದ ರಾವಿ ನೀರು ಪಾಕ್‌ಗೆ ಹರಿದು ಹೋಗ್ತಿತ್ತು. ಆದರೆ ಈಗ ಜಮ್ಮು & ಕಾಶ್ಮೀರದ ಕಥುವಾ ಮತ್ತು ಸಾಂಬ ಜಿಲ್ಲೆಗಳ ಸುಮಾರು 32,000 ಹೆಕ್ಟೇರ್‌ ಕೃಷಿ ಭೂಮಿಗೆ ಇದ್ರಿಂದ ಪ್ರಯೋಜನವಾಗಲಿದೆ ಅಂತ ಗೊತ್ತಾಗಿದೆ. ನೀರು ಮತ್ತು ಜಲವಿದ್ಯುತ್‌ ಉತ್ಪಾದನೆಗೆ ಇಂಪಾರ್ಟೆಂಟ್‌ ಆಗಿರೋ ಈ ಶಾಪುರ್‌ ಕಂಡಿ ಅಣೆಕಟ್ಟು ಯೋಜನೆ ಕಳೆದ 3 ದಶಕಗಳಿಂದ ಸಾಕಷ್ಟು ಸವಾಲುಗಳನ್ನ ಎದುರಿಸಿತ್ತು. ನರಸಿಂಹರಾವ್‌ ಪ್ರಧಾನಿಯಾಗಿದ್ದಾಗ ಇದರ ನಿರ್ಮಾಣ ಕೆಲಸ ಆರಂಭವಾಗಿತ್ತು. ಆದ್ರೆ ನಾನಾ ಕಾರಣಗಳಿಂದ ಇದು ಪೆಂಡಿಂಗ್‌ನಲ್ಲಿತ್ತು. ಇದೀಗ ಈ ಯೋಜನೆಯ ನಿರ್ಮಾಣ ಕಾರ್ಯಗಳು ಆಲ್ಮೋಸ್ಟ್‌ ಮುಕ್ತಾಯಗೊಳ್ಳೋ ಹಂತದಲ್ಲಿದೆ. ಹೀಗಾಗಿ ಈ ಪಾಕ್‌ಗೆ ಹೋಗ್ತಿರೋ ನೀರು ಈಗಿನಿಂದಲೇ ಬಂದ್‌ ಆಗೋಕೆ ಶುರುವಾಗಿದೆ ಅಂತ ಮಾಹಿತಿ ಸಿಕ್ತಾ ಇದೆ. ಅಂದ್ಹಾಗೆ ರಾವಿ ನದಿ ನೀರಲ್ಲಿ ಭಾರತಕ್ಕೆ 95 ಪರ್ಸೆಂಟ್‌ ಶೇರ್‌ ಇದೆ. ಆದ್ರೂ ಇದನ್ನ ಹಿಡಿದು ಇಟ್ಕೊಳ್ಳೋಕೆ ಸಾಧ್ಯವಾಗ್ತಾ ಇರಲಿಲ್ಲ ಅಂತೇಳಿ ಇದನ್ನ ಹಾಗೇ ಪಾಕಿಸ್ತಾನಕ್ಕೆ ಬಿಟ್ಟು ಕಳಿಸಲಾಗ್ತಿತ್ತು. ಈಗ ಡ್ಯಾಂ ನಿರ್ಮಾಣ ಕೆಲಸಗಳು ಜೋರಾಗಿ ಆಗ್ತಾ ಇರೋದ್ರಿಂದ ನದಿ ನೀರನ್ನ ಸ್ಟಾಪ್‌ ಮಾಡಲಾಗಿದೆ ಅಂತ ಮಾಹಿತಿ ಸಿಕ್ತಾ ಇದೆ. ಸಧ್ಯ ಇದುವರೆಗೂ ಇದಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನದಿಂದ ಯಾವುದೇ ರಿಪ್ಲೈ ಇಲ್ಲ. ಅವರು ರಿಪ್ಲೈ ಮಾಡೋಕೂ ಆಗಲ್ಲ.. ಯಾಕಂದ್ರೆ ಸಿಂಧೂ ನದಿ ನೀರಿನ ಒಪ್ಪಂದದ ಪ್ರಕಾರ ರಾವಿ ನದಿಯ 95 ಪರ್ಸೆಂಟ್‌ ನೀರು ಭಾರತಕ್ಕೆ ಸೇರುತ್ತೆ. ಸೋ ಇದರಲ್ಲಿ ಅವರೇನೂ ಮಾತಾಡೋಕೆ ಸಾಧ್ಯವಾಗಲ್ಲ.

-masthmagaa.com

Contact Us for Advertisement

Leave a Reply