ಭಾರತ ಸರ್ಕಾರ ಸರಿಯಾದ ಆರೋಗ್ಯ ಡೇಟಾ ನೀಡ್ತಿಲ್ಲ: ದಿ ಲಾನ್ಸೆಟ್‌

masthmagaa.com:

ಭಾರತದ ಲೋಕಸಭಾ ಚುನಾವಣೆ ಹೊತ್ತಲ್ಲೇ ಪ್ರತಿಷ್ಠಿತ ಹೆಲ್ತ್‌ ಜರ್ನಲ್‌ ʻದಿ ಲಾನ್ಸೆಟ್‌ʼ, ಭಾರತೀಯರ ಆರೋಗ್ಯದ ವಿಚಾರವಾಗಿ ಕಳವಳ ವ್ಯಕ್ತಪಡಿಸಿದೆ. ಅಲ್ದೆ ಮೋದಿ ಸರ್ಕಾರ ಸರಿಯಾಗಿ ಲೆಕ್ಕ ಕೊಡ್ತಿಲ್ಲ ಅಂತ ಗಂಭೀರ ಆರೋಪ ಮಾಡಿದೆ. ಭಾರತದಲ್ಲಿ ಆರೋಗ್ಯದ ವಿಚಾರವಾಗಿ ಅಲ್ಲಿನ ಸರ್ಕಾರ ಸರಿಯಾದ ಡೇಟಾ ನೀಡ್ತಿಲ್ಲ. ಭಾರತ ಸರ್ಕಾರ ನೀಡ್ತಿರೋ ಆರೋಗ್ಯದ ಕುರಿತಾದ ಡೇಟಾ ಅಪ್‌-ಟು-ಡೇಟ್‌ ಇಲ್ಲ… ಅದ್ರಲ್ಲಿ ಇನ್ನಷ್ಟು ಪಾರದರ್ಶಕತೆ ಬೇಕಾಗಿದೆ. ಹೆಲ್ತ್‌ ಪಾಲಿಸಿ, ಪ್ಲಾನಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ ಮಾಡೋಕೆ ಸರಿಯಾದ ಡೇಟಾ ನೀಡೋದು ಅಗತ್ಯ. ಆದ್ರೆ ಭಾರತದಲ್ಲಿ ಈ ಡೇಟಾಗಳು ಸರಿಯಾಗಿಲ್ಲ. ಸೋ ಭಾರತ ಸರ್ಕಾರ ಈ ಬಗ್ಗೆ ಗಮನಹರಿಸ್ಬೇಕುʼ ಅಂತ ಕರೆಕೊಟ್ಟು ರಿಪೋರ್ಟ್‌ ಮಾಡಿದೆ. ಅಲ್ಲದೆ ಕೋವಿಡ್‌ನಿಂದಾಗಿ ಜನಗಣತಿ ಕೂಡ ಡಿಲೇ ಆಗಿದೆ. 2024ರಲ್ಲಿ ನಡೆಯಬೇಕಿದ್ದ ಎಲೆಕ್ಟ್ರಾನಿಕ್‌ ಸರ್ವೇ ಕೂಡ ಇನ್ನೂ ನಡೆದಿಲ್ಲ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಹೆಲ್ತ್‌ ಸರ್ವೇಗೆ ಸೆನ್ಸರ್‌ ಬಹಳ ಮುಖ್ಯ. 2021ರಲ್ಲಿ ಬರಬೇಕಿದ್ದ ಸ್ಯಾಂಪಲ್‌ ರಿಜಿಸ್ಟ್ರೇಶನ್‌ ಸಿಸ್ಟಮ್‌ ಸರ್ವೇ ರಿಪೋರ್ಟ್‌ ಕೂಡ ಇನ್ನೂ ಬಂದಿಲ್ಲ. ದೇಶದ ಶಿಶು ಜನನ, ಮರಣಗಳ ಡೇಟಾಗಿ ಈ ರಿಪೋರ್ಟ್‌ ವಿಶ್ವಾಸಾರ್ಹ ಮೂಲ. ಇದನ್ನ ಡಿಲೇ ಮಾಡಿರೋಕೆ ಸರ್ಕಾರ ಯಾವುದೇ ಕಾರಣ ಕೊಟ್ಟಿಲ್ಲ ಅಂತ ಲ್ಯಾನ್ಸೆಟ್‌ ಆರೋಪಿಸಿದೆ. ಅಲ್ಲದೆ ಭಾರತದಲ್ಲಿ ಕೋವಿಡ್‌ 19ಗೆ 4.8 ಲಕ್ಷ ಜನ ಬಲಿಯಾಗಿದ್ದಾರೆ ಅಂತ ಸರ್ಕಾರ ಹೇಳುತ್ತೆ. ಆದ್ರೆ WHO ಅಂದಾಜಿನ ಪ್ರಕಾರ ಈ ಸಂಖ್ಯೆ 6ರಿಂದ 8 ಪಟ್ಟು ಇದೆ. ಸರ್ಕಾರ ಆರೋಗ್ಯದ ಮೇಲೆ ದೇಶದ GDPಯ 1.2% ಹಣವನ್ನ ಖರ್ಚು ಮಾಡ್ತಿದೆ. ಹಾಗಾಗಿ ಜನರ ಜೇಬಿನಿಂದ ಆರೋಗ್ಯಕ್ಕೆ ಖರ್ಚಾಗೋದು ಹೆಚ್ಚಾಗಿವೆ. ಸರ್ಕಾರದ ಆರೋಗ್ಯ ಯೋಜನೆಗಳು ತಮ್ಮ ಗುತಿ ತಲುಪುವಲ್ಲಿ ಫೇಲಾಗಿವೆ ಅಂತ ಆರೋಪಿಸಿದೆ.

ಇನ್ನು ಈ ಆರೋಪಗಳಿಗೆ ರಿಪ್ಲೈ ನೀಡಿರೋ ಇಂಡಿಯನ್‌ ಮೆಡಿಕಲ್‌ ಅಸೋಷಿಯೇಶನ್‌, ʻಲ್ಯಾನ್ಸೆಟ್‌ನ ಎಡಿಟರ್‌ಗಳು ಮೆಡಿಕಲ್‌ ಜರ್ನಲ್‌ ನಡೆಸುತ್ತಿದ್ದಾರೆ ಅಂತ ನೆನಪಿಸಿಕೊಳ್ಬೇಕು.ಪೊಲಿಟಿಕಲ್ ಜರ್ನಲ್‌ ರೀತಿ ರಿಪೋರ್ಟ್‌ ನೀಡಿದ್ದಾರೆ. ಭಾರತದ ಮೆಡಿಕಲ್‌ ಸಿಸ್ಟಮ್‌ನಲ್ಲಿ ಎಲ್ಲವೂ ಸರಿಯಿದೆ ಅಂತ ನಾವು ಹೇಳ್ತಿಲ್ಲ. ಸರ್ಕಾರದ ಜೊತೆ IMAಗೆ ಒಂದಷ್ಟು ಸಮಸ್ಯೆಗಳಿವೆ. ಅದೇ ರೀತಿ ಬ್ರಿಟನ್‌ನಲ್ಲಿರೋ ಮೆಡಿಕಲ್‌ ಸಮಸ್ಯೆಗಳ ಬಗ್ಗೆ ಈ ಪತ್ರಿಕೆ ಗಮನ ಹರಿಸ್ಬೇಕು. ಅಲ್ಲಿ ಕ್ರಿಟಿಕಲ್‌ ಆಗಿರೋ ರೋಗಿಗಳು ವೈದ್ಯರಿಗೋಸ್ಕರ ಎಂಟತ್ತು ಗಂಟೆ ಕಾಯೋ ಪರಿಸ್ಥಿತಿ ಇದೆ ಅಂತೇಳಿದ್ದಾರೆ. ಅಲ್ಲದೆ ಈ ಪತ್ರಿಕೆ ಭಾರತ ಇನ್ನೂ ಬ್ರಿಟಿಷರ ಆಳ್ವಿಕೆಯಲ್ಲಿದೆ ಅಂದುಕೊಂಡಿದೆ ಅಂತ ಟಾಂಗ್‌ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply