ಮತ್ತೆ ಜೆಫ್‌ ಬೆಸೋಸ್‌ ಟಾಪ್‌ ಶ್ರೀಮಂತ: ಮಸ್ಕ್‌ಗೆ ಭಾರೀ ನಷ್ಟ

masthmagaa.com:

ವಿಶ್ವದ ಟಾಪ್‌ ಶ್ರೀಮಂತರ ಲಿಸ್ಟ್‌ನ ಮೊದಲ ಸ್ಪಾಟ್‌ಗೆ ಈಗ ಮೂರು ಮೂರು ದಿನಕ್ಕೂ ಒಬ್ಬೊಬ್ರು ಬಂದು ಕೂರ್ತಿದ್ದಾರೆ. ಬ್ಲೂಮ್‌ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ನ ಹೊಸ ಲಿಸ್ಟ್‌ನಲ್ಲಿ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಸೋಸ್‌ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಆ ಮೂಲಕ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಮತ್ತೊಮ್ಮೆ ಎರಡನೇ ಸ್ಪಾಟ್‌ಗೆ ಇಳಿದಿದ್ದಾರೆ. ಇನ್ನು ಜೆಫ್‌ ಬೆಸೋಸ್‌ ನೆಟ್‌ ವರ್ಥ್‌ ಸದ್ಯಕ್ಕೆ $200 ಬಿಲಿಯನ್‌ಗೆ ತಲುಪಿದೆ. ಅತ್ತ ಮಸ್ಕ್‌ ಆಸ್ತಿಯಲ್ಲಿ $32 ಬಿಲಿಯನ್‌ ಡಾಲರ್‌ ಕರಗಿ $198ಗೆ ಇಳಿದಿದೆ. ಇತ್ತೀಚೆಗಷ್ಟೆ LVHM ಒಡೆಯ ಬರ್ನಾರ್ಡ್‌ ಅರ್ನಾಲ್ಟ್‌ ಕೂಡ ಟಾಪ್‌ಗೆ ಬಂದು ಸ್ವಲ್ಪ ದಿವಸ ಇದ್ರು. ಸದ್ಯ ಈ ಮೂವರ ಆಸ್ತಿ ಮೌಲ್ಯದ ಡಿಫರೆನ್ಸ್‌ ಎರಡ್ಮೂರು ಬಿಲಿಯನ್‌ ಇರೋದ್ರಿಂದ ಇದೇ ರೀತಿ ಸ್ಥಾನಗಳಲ್ಲಿ ಬದಲಾವಣೆ ಆಗ್ತಿರುತ್ತೆ.

-masthmagaa.com

Contact Us for Advertisement

Leave a Reply