ʻಇಬ್ಬರೇ ಬಾಸ್‌ಗಳು, ಒಬ್ಬರು ಅಪ್ಪು ಬಾಸ್‌ ಮತ್ತೊಬ್ಬರು ಯೂನಿವರ್ಸಲ್‌ ಬಾಸ್‌ʼ – ಕ್ರಿಸ್‌ ಗೇಲ್

masthmagaa.com:

ಕ್ರಿಕೆಟ್‌ ಲೋಕದಲ್ಲಿ ಯೂನಿವರ್ಸಲ್‌ ಬಾಸ್‌ ಅಂತಾನೇ ಖ್ಯಾತಿ ಪಡೆದಿರುವ ವೇಸ್ಟ್‌ ಇಂಡೀಸ್‌ನ ಸ್ಪೋಟಕ ಬ್ಯಾಟ್ಸ್ಮೆನ್‌ ಕ್ರಿಸ್‌ ಗೇಲ್ ಅಪ್ಪು ಅವರನ್ನ ಹಾಡಿ ಹೊಗಳಿದ್ದಾರೆ. ಆರ್ ಸಿಬಿ ತಂಡದ ಸಾಕಷ್ಟು ಆಟಗಾರರು ಕನ್ನಡ ಚಿತ್ರರಂಗದ ನಟರ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇದೀಗ ಆರ್ ಸಿಬಿ ತಂಡದ ಮಾಜಿ ಆಟಗಾರ ಕ್ರಿಸ್ ಗೆಲ್ ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡಿದ್ದಾರೆ. ಆರ್‌ ಸಿಬಿ ಅನ್‌ಬಾಕ್ಸಿಂಗ್‌ ಮಾತುಕತೆಯಲ್ಲಿ ಕ್ರಿಸ್‌ ಗೇಲ್‌ ಪುನೀತ್‌ ಬಗ್ಗೆ ಮಾತನಾಡಿದ್ದು, ವಿಶ್ವದಲ್ಲಿ ಇರುವುದು ಇಬ್ಬರೇ ಬಾಸ್‌ಗಳು, ಒಬ್ಬರು ಅಪ್ಪು ಬಾಸ್‌ ಮತ್ತೋಬ್ಬರು ಯೂನಿವರ್ಸಲ್‌ ಬಾಸ್‌ ಎಂದಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದು ಕೇವಲ ನಮ್ಮ ದೇಶವಲ್ಲ, ಪುನೀತ್‌ ಬಗ್ಗೆ ಗೊತ್ತಿರುವ ಪರದೇಶದವರು ಕೂಡಾ ಅವರನ್ನು ಇಷ್ಟಪಡುತ್ತಾರೆ, ಕೊಂಡಾಡುತ್ತಾರೆ. ಈಗ ಅದಕ್ಕೆ ಸಾಕ್ಷಿಯಾಗಿ ಖ್ಯಾತ ಕ್ರಿಕೆಟಿಗ ಕ್ರಿಸ್‌ ಗೇಲ್‌ ಅವರು ಪುನೀತ್‌ ಅವರ ಬಗ್ಗೆ ಮಾತನಾಡಿದ್ದಾರೆ.

ನಂತರ ನಿಮ್ಮ ತವರು ಯಾವುದು ಅಥವಾ ನಿಮ್ಮ ಹೋಮ್​ಟೌನ್ ಯಾವುದು ಎಂದಾಗ ನನಗೆ ಎರಡು ಹೋಮ್ ಟೌನ್ ಇದೆ. ಒಂದು ಕೆರಿಬಿಯನ್ ಮತ್ತೊಂದು ಕಲಬುರ್ಗಿ ಎಂದಿದ್ದಾರೆ ಕ್ರಿಸ್ ಗೇಲ್. ಕಲಬುರ್ಗಿಗೆ ಭೇಟಿ ನೀಡಿರುವುದಾಗಿಯೂ ಹೇಳಿರುವ ಕ್ರಿಸ್ ಗೇಲ್, ಜೋಳದ ರೊಟ್ಟಿ, ಶೆಂಗ ಚಟ್ನಿ ಚೆನ್ನಾಗಿರುತ್ತೆ ಎಂದು ಸಹ ಹೇಳಿದ್ದಾರೆ. ‘ತ್ರಾಸಾಕ್ಕೆತಿ’ ಹಾಡು ಸಹ ಹಾಡಿದ್ದಾರೆ.

-masthmagaa.com

Contact Us for Advertisement

Leave a Reply