ಚೀನಾ ಜೊತೆಗೆ ರಹಸ್ಯ ಮಾತುಕತೆ ಮಾಡ್ತಿದ್ದಾರೆ ಟಿಬೆಟ್‌ ನಾಯಕರು!

masthmagaa.com:

ಭಾರತದ ರಕ್ಷಣೆಯಲ್ಲಿರೋ ಟಿಬೆಟ್‌ ನಾಯಕರು ರಹಸ್ಯವಾಗಿ ಚೀನಾ ಜೊತೆಗೂ ಮಾತಾಡ್ತಿದ್ದರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಚೀನಾ ಜೊತೆಗಿನ ಸಮಸ್ಯೆಯನ್ನ ಪರಿಹಾರ ಮಾಡೋಕೆ ಪ್ರೈವೇಟ್‌ ಆಗಿ ಮಾತುಕತೆ ನಡೀತಿದೆ. ಆದ್ರೆ ಚೀನಾದಿಂದ ಯಾವುದೇ ನಿರೀಕ್ಷಿತ ಉತ್ತರ ಸಿಕ್ತಿಲ್ಲ ಅನ್ನೋ ವಿಚಾರವನ್ನ ಭಾರತದಲ್ಲಿರೋ Central Tibetan Administration ಅಂದ್ರೆ ಟಿಬೆಟ್‌ ನನ್ನದು ಅಂತ ಹೇಳ್ತಿರೋ ಸರ್ಕಾರ ಹೇಳಿದೆ. ʻಕಳೆದ ಕೆಲ ವರ್ಷದಿಂದ ನಾವು ಚೀನಾದೊಂದಿಗೆ , ಈ ವಿಚಾರವಾಗಿ ಚರ್ಚೆ ಮಾಡ್ತಿದ್ದೇವೆ. ಆದರೆ ಸದ್ಯ ಈ ವಿಚಾರವಾಗಿ ನಮಗೆ ಯಾವುದೇ ನಿರೀಕ್ಷೆ ಇಲ್ಲ.. ನಾವ್‌ ಇದನ್ನ ಲಾಂಗ್‌ ಟೈಮ್ ಕಂಟಿನ್ಯೂ ಮಾಡ್ತಿವಿ ಅಂತ ಟಿಬೇಟಿಯನ್‌ ಪೊಲಿಟಿಷಿಯನ್‌ ಪೆನ್ಪಾ ಸೆರಿಂಗ್‌ ಹೇಳಿದ್ದಾರೆ. ಅಂದ್ಹಾಗೆ ಟಿಬೆಟ್‌ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೊ ಸಂಬಂಧ 2010ರಲ್ಲಿ ಟಿಬೆಟಿಯನ್ನರ ಧರ್ಮ ಗುರು ದಲಾಲೈಮ ಹಾಗೂ ಚೀನಾ ಅಧಿಕಾರಿಗಳ ನಡುವೆ 9 ಸುತ್ತಿನ ಮಾತುಕತೆ ನಡೆದು ಈ ಟಿಬೇಟ್ ಪ್ರಸ್ತಾಪ ಮುರಿದು ಬಿದ್ದಿತ್ತು. ಆದ್ರೆ ಈಗ ಮತ್ತೆ ದಶಕದ ಬಳಿಕ ಸಿಕ್ರೇಟ್‌ ಮಾತುಕತೆ ನಡಿತಿದೆ ಅಂತೇಳಲಾಗ್ತಿದೆ. ಇದು ಭಾರತದ ದೃಷ್ಟಿಲೂ ತುಂಬಾ ಇಂಪಾರ್ಟೆಂಟ್.‌ ಯಾಕಂದ್ರೆ ಈ ಟಿಬೆಟ್‌ ಸರ್ಕಾರದ ಹೆಡ್‌ಕ್ವಾರ್ಟರ್ಸ್‌ ಇರೋದು ಭಾರತದಲ್ಲಿ.

-masthmagaa.com

Contact Us for Advertisement

Leave a Reply