ಷೇರುಪೇಟೆ: 20% ಇಳೆಕೆಯಾದ ಭಾರತದ VIX ಇಂಡೆಕ್ಸ್‌!

masthmagaa.com:

ಭಾರತದ ಷೇರು ಮಾರುಕಟ್ಟೆ ಮೂರನೇ ಸೆಶನ್‌ನಲ್ಲೂ ಪಾಸಿಟಿವ್‌ ಆಗಿ ಪರ್ಫಾಮೆನ್ಸ್‌ ನೀಡಿದ್ದು, ದಿನದ ವಹಿವಾಟು ಹಸಿರುಪಟ್ಟಿಯಲ್ಲಿ ಅಂತ್ಯವಾಗಿದೆ. ಮಿಡಲ್‌ಈಸ್ಟ್‌ನಲ್ಲಿ ಸದ್ಯ ಮೇಜರ್‌ ಅನ್ನೋ ಹಾಗೇ ಉದ್ವಿಗ್ನತೆಯ ಲಕ್ಷಣಗಳು ಕಾಣದೇ, ಷೇರುಪೇಟೆ ಕಾರ್ಪೋರೇಟ್‌ ಅರ್ನಿಂಗ್ಸ್‌ ಕಡೆ ಮುಖ ಮಾಡಿದೆ. ಇನ್ನು ಭಾರತದ VIX ಇಂಡೆಕ್ಸ್‌ 20% ಕುಸಿದಿದ್ದು, ಮುಂದಿನ 30 ದಿನಗಳ ಕಾಲ ಷೇರುಪೇಟೆ ಸ್ಥಿರತೆ ಮತ್ತು ಬೆಳವಣಿಗೆಯ ಸೂಚನೆ ನೀಡಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಬೆಂಚ್‌ ಮಾರ್ಕ್‌ ಇಂಡೆಕ್ಸ್‌ಗಳಾದ ಸೆನ್ಸೆಕ್ಸ್‌ 90 ಪಾಯಿಂಟ್ಸ್‌ ಏರಿಕೆಯಾಗಿ 73,738.45ಕ್ಕೆ ತಲುಪಿದೆ. ಇನ್ನು ನಿಫ್ಟಿ 32 ಪಾಯಿಂಟ್ಸ್‌ ಗಳಿಸಿ 22,368ಕ್ಕೆ ಏರಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ 03 ಪೈಸೆ ಏರಿಕೆಯಾಗಿ 83.33 ಆಗಿದೆ. (83 ರೂಪಾಯಿ 33 ಪೈಸೆ).

-masthmagaa.com

Contact Us for Advertisement

Leave a Reply