ಅಫ್ಘನಿಸ್ತಾನವನ್ನು ಕೈಬಿಡೋದು ತಪ್ಪು: ಯುಕೆ ಮಾಜಿ ಪ್ರಧಾನಿ ಕೆಂಡ

masthmagaa.com:

ಅಫ್ಘಾನಿಸ್ತಾನವನ್ನು ಇಂಥಾ ಅಪಾಯಕಾರಿ ಸ್ಥಿತಿಯಲ್ಲಿ ಬಿಟ್ಟು ಬರೋದು ಸರಿಯಲ್ಲ ಅಂತ ಯುನೈಟೆಡ್ ಕಿಂಗ್​ಡಮ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಹೇಳಿದ್ದಾರೆ. ಈ ಹಿಂದೆ 2001ರಲ್ಲಿ ಇವರೇ ಇಲ್ಲಿ ಪ್ರಧಾನಿಯಾಗಿದ್ರು. ಅಮೆರಿಕದ ಜೊತೆಗೆ ಯುನೈಟೆಡ್​ ಕಿಂಗ್​ಡಮ್​​ನ್ನು ಅಫ್ಘಾನಿಸ್ತಾನದ ಕದನಕಣಕ್ಕೆ ಕಳುಹಿಸಿದ್ದು ಕೂಡ ಇವರೇ.. ಇದೀಗ ತಮ್ಮ ಫೌಂಡೇಷನ್​​ನ ವೆಬ್​ಸೈಟ್​ನಲ್ಲಿ ಉದ್ದುದ್ದವಾಗಿ ಆರ್ಟಿಕಲ್ ಬರೆದಿರೋ ಇವರು, ಅಫ್ಘಾನಿಸ್ತಾನದಿಂದ ಹೊರಬರೋ ಪಾಶ್ಚಿಮಾತ್ಯ ದೇಶಗಳ ನಿರ್ಧಾರವನ್ನು ಖಂಡಿಸಿದ್ದಾರೆ. ಈ ನಿರ್ಧಾರ ನಮ್ಮ ಹಿತಾಸಕ್ತಿಯಲ್ಲೂ ಇಲ್ಲ. . ಅಫ್ಘಾನಿಸ್ತಾನ ಜನರ ಹಿತಾಸಕ್ತಿಯಲ್ಲೂ ಇಲ್ಲ ಅಂತ ಕಿಡಿಕಾರಿದ್ದಾರೆ. ಈ ನಡುವೆ ತಾಲಿಬಾನಿಗಳ ಟೇಕೋವರ್ ವಿರುದ್ಧ ಲಂಡನ್​​ನಲ್ಲೂ ಪ್ರತಿಭಟನೆ ನಡೆದಿದೆ. ಸಾವಿರಾರು ಮಂದಿ ಬೀದಿಗೆ ಇಳಿದು ತಾಲಿಬಾನಿಗಳು ಬದಲಾಗಿಲ್ಲ, ಅಫ್ಘನ್ನರನ್ನು ಕೊಲ್ಲೋದನ್ನು ನಿಲ್ಲಿಸಿ ಅಂತ ಘೋಷಣೆಗಳನ್ನು ಕೂಗಿದ್ದಾರೆ.

-masthmagaa.com

Contact Us for Advertisement

Leave a Reply